ADVERTISEMENT

ಯಾದಗಿರಿ: 3 ತಿಂಗಳ ಮಗುವಿಗೂ ಕೋವಿಡ್‌

ಮತ್ತೆ 52 ಜನರಿಗೆ ಕೋವಿಡ್‌, ಸೋಂಕಿತರ ಸಂಖ್ಯೆ 787ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 17:15 IST
Last Updated 13 ಜೂನ್ 2020, 17:15 IST
ಯಾದಗಿರಿಯ ಆಯುಷ್‌ ಆಸ್ಪತ್ರೆಯಲ್ಲಿ ತೆಗೆದಿರುವ ಜ್ವರ ತಪಾಸಣೆ ಕೇಂದ್ರ
ಯಾದಗಿರಿಯ ಆಯುಷ್‌ ಆಸ್ಪತ್ರೆಯಲ್ಲಿ ತೆಗೆದಿರುವ ಜ್ವರ ತಪಾಸಣೆ ಕೇಂದ್ರ   

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ 3 ತಿಂಗಳ ಮಗು ಸೇರಿದಂತೆ 52 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 787 ಕೋವಿಡ್‌ ಪ್ರಕರಣಗಳುದೃಢಪಟ್ಟಿವೆ.

ಯಾದಗಿರಿ ತಾಲ್ಲೂಕಿನ ಅಲ್ಲಿಪುರ ತಾಂಡಾದ 19 ವರ್ಷದ ಯುವಕ, ಆಶಾನಾಳ ಗ್ರಾಮದ 75 ವರ್ಷದ ಪುರುಷ, 50 ವರ್ಷದ ಪುರುಷ, 21 ವರ್ಷದ ಮಹಿಳೆ, 14 ವರ್ಷದ ಬಾಲಕ, ಯರಗೋಳ ತಾಂಡಾದ 35 ವರ್ಷದ ಮಹಿಳೆ, ಯರಗೋಳದ 37 ವರ್ಷದ ಪುರುಷ, ಥವರುನಾಯಕ ತಾಂಡಾದ 3 ತಿಂಗಳ ಹೆಣ್ಣುಮಗು, 3 ವರ್ಷದ ಬಾಲಕ, ಥವರುನಾಯಕ ತಾಂಡಾದ 5 ವರ್ಷದ ಬಾಲಕ, ತಾರಾ ನಾಯಕ ತಾಂಡಾದ 6 ವರ್ಷದ ಬಾಲಕ, 10 ವರ್ಷದ ಬಾಲಕ, ವಡೆಗೇರಾ ತಾಲ್ಲೂಕಿನ ಬೆಂಡೆಬೆಂಬಳಿಯ 50 ವರ್ಷದ ಮಹಿಳೆಗೆ ಕೋವಿಡ್‌ ದೃಢಪಟ್ಟಿದೆ.

ಸೈದಾಪುರದ 3 ವರ್ಷದ ಹೆಣ್ಣುಮಗು, ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 45 ವರ್ಷದ ಪುರುಷ, ಯಲ್ಹೇರಿ ತಾಂಡಾದ 30 ವರ್ಷದ ಮಹಿಳೆ, ಸುರುಪುರ ತಾಲ್ಲೂಕಿನ ಯಂತಾಪುರದ 5 ವರ್ಷದ ಬಾಲಕಿ, ವಡೆಗೇರಾದ 38 ವರ್ಷದ ಮಹಿಳೆ, ಬೆಂಡೆಬೆಂಬಳಿಯ 11 ವರ್ಷದ ಬಾಲಕ (ಪಿ-6684), ಬೆಂಡೆಬೆಂಬಳಿಯ 12 ವರ್ಷದ ಬಾಲಕಿ (ಪಿ-6685) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 52 ಜನ ಸೋಂಕಿತರಲ್ಲಿ 27 ಮಹಿಳೆಯರು, 25 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.