ADVERTISEMENT

ಯಾದಗಿರಿ | ಮತ್ತೊಬ್ಬರಲ್ಲಿ ಕೋವಿಡ್‌ ಸೋಂಕು ಪತ್ತೆ

13ಕ್ಕೆ ಏರಿದ ಕೋವಿಡ್‌–19 ಪ್ರಕರಣ, ಕ್ವಾರಂಟೈನ್‌ನಲ್ಲಿದ್ದವರಲ್ಲಿ ಸೋಂಕು

​ಪ್ರಜಾವಾಣಿ ವಾರ್ತೆ
Published 20 ಮೇ 2020, 16:19 IST
Last Updated 20 ಮೇ 2020, 16:19 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಯಾದಗಿರಿ:ಜಿಲ್ಲೆಯಲ್ಲಿ ಬುಧವಾರ ಮತ್ತೆ 55 ವರ್ಷದ ಮಹಿಳೆಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದರಿಂದ ಕೋವಿಡ್-19 ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.

ಗುರುಮಠಕಲ್ ತಾಲ್ಲೂಕಿನ ಯಂಪಾಡ್ ತಾಂಡಾದ ಮಹಿಳೆ (ರೋಗಿ ಸಂಖ್ಯೆ ಪಿ-1448) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಂತರ ರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮುಂಬೈನಿಂದ ಜಿಲ್ಲೆಗೆ ಮೇ 14ರಂದು ಆಗಮಿಸಿದ್ದರು. ಇವರನ್ನು ಯಂಪಾಡ್ ತಾಂಡಾದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ವರದಿ ಬಂದ ಬಳಿಕ ಯಾದಗಿರಿಯ ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

13 ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದಿರುವ 11 ವಲಸೆ ಕಾರ್ಮಿಕರಿಗೆ ಇಲ್ಲಿಯವರೆಗೆ ಸೋಂಕು ತಗುಲಿದೆ. ಇಬ್ಬರೂ ಮಾತ್ರ ಗುಜರಾತ್‌ನಿಂದ ಬಂದವರಾಗಿದ್ದಾರೆ.

ADVERTISEMENT

ಮೇ 14 ರಂದು ಮುಂಬೈನಿಂದ ಖಾಸಗಿ ವಾಹನದಲ್ಲಿ ಸೋಂಕಿತ ಮಹಿಳೆ ಸೇರಿದಂತೆ 15 ಜನ ಯಾದಗಿರಿ ಜ್ವರ ತಪಾಸಣೆ ಕೇಂದ್ರಕ್ಕೆ ಬಂದಿದ್ದಾರೆ. ಅಲ್ಲಿಂದ ಗುರುಮಠಕಲ್‌ ತಾಲ್ಲೂಕಿನ ಯಂಪಾಡ ತಾಂಡದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

‘ಮೇ 18ರಂದು ಕೋವಿಡ್-19 ಖಚಿತಪಟ್ಟ 24 ವರ್ಷದ ಮಹಿಳೆ(ಪಿ-1187) ಯಾದಗಿರಿ ಜಿಲ್ಲೆಯವರಾಗಿದ್ದು, ಕಲಬುರ್ಗಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿರುತ್ತಾರೆ. ಇವರು ಕೂಡ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದರು. ಇವರನ್ನು ಸೇರಿದಂತೆ ಜಿಲ್ಲೆಯಲ್ಲಿ ಪಾಸಿಟಿವ್ ವ್ಯಕ್ತಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.