ADVERTISEMENT

ಕೋವಿಡ್‌: ತೆಲಂಗಾಣ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 16:16 IST
Last Updated 8 ಆಗಸ್ಟ್ 2021, 16:16 IST
ಗುರುಮಠಕಲ್‌ನ ಇಟ್ಕಾಲ್ ಗೇಟ್ ಬಳಿಯ ಚೆಕ್‌ಪೋಸ್ಟ್‌ಗೆ ಭಾನುವಾರ ತಹಶೀಲ್ದಾರ್ ಶರಣಬಸವ ರಾಣಪ್ಪ ತೆರಳಿ ಗಡಿಯಲ್ಲಿನ ತಪಾಸಣೆ ಪರಿಶೀಲಿಸಿದರು
ಗುರುಮಠಕಲ್‌ನ ಇಟ್ಕಾಲ್ ಗೇಟ್ ಬಳಿಯ ಚೆಕ್‌ಪೋಸ್ಟ್‌ಗೆ ಭಾನುವಾರ ತಹಶೀಲ್ದಾರ್ ಶರಣಬಸವ ರಾಣಪ್ಪ ತೆರಳಿ ಗಡಿಯಲ್ಲಿನ ತಪಾಸಣೆ ಪರಿಶೀಲಿಸಿದರು   

ಗುರುಮಠಕಲ್: ಕೋವಿಡ್ 3ನೇ ಅಲೆ ಹಬ್ಬುವಿಕೆ ನಿಯಂತ್ರಿಸಲು ತಾಲ್ಲೂಕಿನ ಪುಟಪಾಕ ಮತ್ತು ಇಟಕಲ್ ಗೇಟ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಗಡಿ ಪ್ರವೇಶಿಸುವ ಪ್ರಯಾಣಿಕರನ್ನು ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದರು.

ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ಲಸಿಕೆಪಡೆದ ಪ್ರಮಾಣ ಪತ್ರ ಹಾಗೂ 72 ಗಂಟೆಗಳ ಅವಧಿಯೊಳಗಿನ ನೆಗೆಟಿವ್‌ ವರದಿ ಹೊಂದುವುದು ಕಡ್ಡಾಯವಾಗಿದೆ.

ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ ನೆಗೆಟಿವ್ ವರದಿ ಇಲ್ಲದರನ್ನು ಮೂಗಿನ ದ್ರವದ ಮಾದರಿ ಪಡೆಯಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಂಡುಬಂದರೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದುವರೆಗಿನ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಕಂಡುಬಂದಿಲ್ಲ ಎಂದು ಆರೋಗ್ಯ ಸಿಬ್ಬಂದಿ ತಿಳಿಸಿದರು.

ADVERTISEMENT

ಚೆಕ್‌ಪೋಸ್ಟ್‌ಗಳಲ್ಲಿ ತಲಾ ಒಬ್ಬ ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಿದರೆ ಪ್ರಯಾಣಿಕರ ತಪಾಸಣೆಗೆ ಅನುಕೂಲವಾಗಲಿದೆ. ಈಗ ಜನರ ಓಡಾಟ ಕಡೆಯಿದೆ. ಒಂದು ವೇಳೆ ಹೆಚ್ಚಾದರೆ ತಪಾಸಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದರು.

ಸರ್ಕಾರದ ಆದೇಶದಂತೆ ಚೆಕ್‌ ಪೋಸ್ಟ್‌ಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯ ನೇಮಕದ ಕುರಿತು ಮುಂದೆ ತೀರ್ಮಾನಿಸಲಾಗುವುದು ಎಂದು ತಹಶೀಲ್ದಾರ್ ಶರಣಬಸವ ರಾಣಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.