ADVERTISEMENT

ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ: ಆರೋಪಿಗಳ ಬಂಧನ

ಶಹಾಪುರ ನಗರದ ಪಾನ್‌ ಶಾ‍ಪ್‌ಗಳ ಮೇಲೆ ಅಬಕಾರಿ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 4:12 IST
Last Updated 13 ಆಗಸ್ಟ್ 2022, 4:12 IST
ಯಾದಗಿರಿ ಜಿಲ್ಲೆಯ ಶಹಾ‍ಪುರದಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ (ಗುಳಿಗೆ) ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ
ಯಾದಗಿರಿ ಜಿಲ್ಲೆಯ ಶಹಾ‍ಪುರದಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ (ಗುಳಿಗೆ) ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ   

ಪ್ರಜಾವಾಣಿ ವಾರ್ತೆ

ಯಾದಗಿರಿ: ಜಿಲ್ಲೆಯ ಶಹಾ‍ಪುರ ನಗರದಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ (ಗುಳಿಗೆ) ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಪ್ರತಾಪಸಿಂಗ್ ರಾಜೇಂದ್ರ ಪ್ರತಾಪಸಿಂಗ್, ಮೋಹಿತಕುಮಾರ ಭನವರಿಲಾಲ್ ಎನ್ನುವ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಘಟನೆ ವಿವರ: ಶಹಾಪುರ ಉಪವಿಭಾಗ ಅಬಕಾರಿ ಉಪಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ಶಹಾಪುರ ನಗರದ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ಅಬಕಾರಿ ದಾಳಿ ಮಾಡಿದಾಗ ಅಕ್ರಮವಾಗಿ ಆನಂದ ಮುನಕ್ಕಾ ಎಂದು ಮುದ್ರಿತ ಹಸಿರು ಬಣ್ಣದ ಸ್ಯಾಚೆಟ್‌ಗಳಲ್ಲಿ ಗಾಂಜಾ ಮಿಶ್ರಿತ ಗುಳಿಗೆ(ಚಾಕೋಲೆಟ್) ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ 1985 ಯಡಿ ಪ್ರಕರಣ ದಾಖಲಿಸಲಾಗಿದೆ.

ಶಹಾಪುರ ನಗರದ ರಾಜು ಪಾನ್‌ಶಾಪ್‌ನಲ್ಲಿ145 ಗಾಂಜಾ ಮಿಶ್ರಿತ ಗುಳಿಗೆಗಳ ಸ್ಯಾಚೆಟ್‌, 930 ಗ್ರಾಂ ಜಪ್ತಿಪಡಿಸಿಕೊಂಡು ಜಿತೇಂದ್ರ ಪ್ರತಾಪಸಿಂಗ್ ರಾಜೇಂದ್ರ
ಪ್ರತಾಪಸಿಂಗ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸಿಇಐಬಿ ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್‌ಟಿ ಪ್ರಕರಣ
ದಾಖಲಿಸಿದ್ದಾರೆ.

ಮಹೇಶ ಪಾನಶಾಪ್‌ನಲ್ಲಿ150 ಗಾಂಜಾ ಮಿಶ್ರಿತ ಗುಳಿಗೆಗಳ ಸ್ಯಾಚೆಟ್‌, 945 ಗ್ರಾಂ ಜಪ್ತಿಪಡಿಸಿಕೊಂಡು ಮೋಹಿತಕುಮಾರ ಭನವರಿಲಾಲ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಹಾಪುರ ಉಪವಿಭಾಗ ಅಬಕಾರಿ ನಿರೀಕ್ಷಕ ಧನರಾಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಸಿಬ್ಬಂದಿಗಳಾದ ಮಹ್ಮದ್ ರಫಿ, ಪ್ರವೀಣ್ ಕುಮಾರ್, ಚಂದ್ರಶೇಖರ, ಅನಿಲಕುಮಾರ, ಜಟ್ಟೆಪ್ಪ, ದೊಂಡಿಬಾ, ಕಾಸಿಂ ಪಟೇಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.