ADVERTISEMENT

ಸೈದಾಪುರ: ನೀರಿನ ರಭಸಕ್ಕೆ ಕ್ರೂಸರ್ ಪಲ್ಟಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 16:11 IST
Last Updated 16 ಆಗಸ್ಟ್ 2020, 16:11 IST
ಸೈದಾಪುರ ಸಮೀಪದ ಕೊಂಡಾಪುರ ಬಳಿ ಇರುವ ಹಳ್ಳದಲ್ಲಿ ಕ್ರೂಸರ್ ಮಗುಚಿ ಬಿದ್ದಿರುವುದು
ಸೈದಾಪುರ ಸಮೀಪದ ಕೊಂಡಾಪುರ ಬಳಿ ಇರುವ ಹಳ್ಳದಲ್ಲಿ ಕ್ರೂಸರ್ ಮಗುಚಿ ಬಿದ್ದಿರುವುದು   

ಸೈದಾಪುರ: ಸೈದಾಪುರ ಸಮೀಪದ ಕೊಂಡಾಪುರ ಬಳಿಯಿರುವ ಹಳ್ಳದ ಸೇತುವೆಯಲ್ಲಿ ಕ್ರೂಸರ್ ಮಗುಚಿ ಬಿದ್ದ ದುರ್ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ವಡಗೇರಾ ತಾಲ್ಲೂಕಿನ ತುಮಕೂರಿನಿಂದ ಗುರುಮಠಕಲ್ ತಾಲ್ಲೂಕಿನ ದಬ್ ಧಬಿಜಲಪಾತ ವೀಕ್ಷಣೆ ಮಾಡಲು ಗೆಳೆಯರು ತೆರಳಿದ್ದರು. ಸಂಜೆ ಮರಳಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿರುವಾಗ ಘಟನೆ ಸಂಭವಿಸಿದೆ.

ಮಳೆಯ ಅಬ್ಬರದಿಂದ ಕೊಂಡಾಪುರ ಬಳಿಯಿರುವ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಸೇತುವೆ ಮೇಲೆ ಹರಿಯುತ್ತಿದೆ.

ADVERTISEMENT

ಕ್ರೂಸರ್‌ನಲ್ಲಿ ಸುಮಾರು 12ರಿಂದ 15 ಜನರು ಪ್ರಯಾಣಿಸುತ್ತಿದ್ದರು. ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೆಲವರ ಮೊಬೈಲ್‍ಗಳು ನೀರಿನಲ್ಲಿ ಬಿದ್ದು ಹೋಗಿವೆ.

‘ಈ ಮೊದಲು ಇದೇ ಹಳ್ಳದಲ್ಲಿ ಹತ್ತಿ ತುಂಬಿದ ಟ್ರ್ಯಾಕ್ಟರ್ ಮಗುಚಿ ಬಿದ್ದಿತ್ತು. ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಗಳು ಕೂಡ ಭೇಟಿ ನೀಡಿಲ್ಲ. ಸೇತುವೆಯ ಗುಂಡಿ ಮುಚ್ಚುವ ಕಾರ್ಯ ಆಗಿಲ್ಲ’ ಎಂದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.