ADVERTISEMENT

ಸುರಪುರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ದಲಿತ ಸಂಘಟನೆಗಳಿಂದ ನಿರಂತರ ಧರಣಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:42 IST
Last Updated 21 ಆಗಸ್ಟ್ 2025, 6:42 IST
ಸುರಪುರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟದವರು ಏರ್ಪಡಿಸಿರುವ ನಿರಂತರ ಧರಣಿ ಕಾರ್ಯಕ್ರಮ್ಲಲಿ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು
ಸುರಪುರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟದವರು ಏರ್ಪಡಿಸಿರುವ ನಿರಂತರ ಧರಣಿ ಕಾರ್ಯಕ್ರಮ್ಲಲಿ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು   

ಸುರಪುರ: ಅಂಬೇಡ್ಕರ್ ವೃತ್ತದ ಅಭಿವೃದ್ಧಿಗಾಗಿ ಖಾರಿಜ್ ಖಾತಾ ಸರ್ವೆ ನಂ.7/1 ರಲ್ಲಿ ಒತ್ತುವರಿಯಾಗಿರುವ 2.26 ಗುಂಟೆ ಭೂಮಿ ಮಂಜೂರಾತಿ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಬುಧವಾರದಿಂದ ನಿರಂತರ ಧರಣಿ ಪ್ರಾರಂಭಿಸಿದರು.

ಒಕ್ಕೂಟದ ಮುಖಂಡರು ಮಾತನಾಡಿ, ‘ಸದರಿ ನಿವೇಶನದಲ್ಲಿ 43 ವರ್ಷಗಳಿಂದ ಅಂಬೇಡ್ಕರ್ ವೃತ್ತವಿದೆ. ಈ ವೃತ್ತ ಅಭಿವೃದ್ದಿಗಾಗಿ ನಿವೇಶನ ಮಂಜೂರಾತಿಗೆ ಒತ್ತಾಯಿಸಿ ಪ್ರತಿಭಟನೆ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ನಿವೇಶನ ಮಂಜೂರು ಮಾಡುತ್ತಿಲ್ಲ’ ಎಂದು ದೂರಿದರು.

‘ನಮ್ಮ ಹೋರಾಟ ಯಾವುದೇ ವ್ಯಕ್ತಿ, ಸಮುದಾಯದ ವಿರುದ್ಧವಲ್ಲ. ವೃತ್ತದ ಅಭಿವೃದ್ಧಿಗಾಗಿ ನಿವೇಶನ ಮಂಜೂರಾತಿಗೆ ಮಾತ್ರ ಹೋರಾಟವಿದೆ. ನಮ್ಮ ಬೇಡಿಕೆ ಈಡೇರುವವರೆಗೂ ನಿರಂತರ ಧರಣಿ ಮುಂದುವರಿಯಲಿದೆ. ಹಳ್ಳಿ-ಹಳ್ಳಿಯಿಂದ ಪ್ರತಿದಿನವೂ ದಲಿತ ಬಾಂಧವರು ಆಗಮಿಸಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಒತ್ತುವರಿಯಾದ ಭೂಮಿಯಲ್ಲಿ ಕನಿಷ್ಠ 1 ಎಕರೆ ಭೂಮಿ ಮಂಜೂರು ಮಾಡಿ ಸುಸಜ್ಜಿತ ಗ್ರಂಥಾಲಯ, ಉದ್ಯಾನ, ಸಾಂಸ್ಕೃತಿಕ ಭವನವನ್ನು ಸರ್ಕಾರ ನಿರ್ಮಿಸಿ ಕೊಡಬೇಕು. ಸುರಪುರ ಪಿಐ ಅವರನ್ನು ಅಮಾನತುಗೊಳಿಸಬೇಕು. ಕೆಂಭಾವಿ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿರುವ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ದಲಿತರ ಮೇಲೆ ಹಾಕಿರುವ ಸುಳ್ಳು ಪ್ರಕರಣ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾನಪ್ಪ ಕಟ್ಟಿಮನಿ, ಮಾನು ಗುರಿಕಾರ, ನಾಗಣ್ಣ ಕಲ್ಲದೇವನಹಳ್ಳಿ, ಮಾನಪ್ಪ ಕರಡಕಲ್, ವೆಂಕಟೇಶ ಹೊಸಮನಿ, ಭೀಮರಾಯ ಸಿಂದಗೇರಿ, ಶಿವಲಿಂಗ ಚಲುವಾದಿ, ಮಾಳಪ್ಪ ಕಿರದಳ್ಳಿ, ನಿಂಗಣ್ಣ ಗೋನಾಲ, ರಾಹುಲ ಹುಲಿಮನಿ, ಮೂರ್ತಿ ಬೊಮ್ಮನಳ್ಳಿ, ಶ್ರೀನಿವಾಸ ನಾಯಕ, ರಾಜು ಕಟ್ಟಿಮನಿ, ಹಣಮಂತ ಹೊಸಮನಿ, ರಾಜು ಕಟ್ಟಿಮನಿ, ಮಹಾದೇವ ಚಲುವಾದಿ, ಮರೆಪ್ಪ ಕಾಂಗ್ರೆಸ್, ಅವಿನಾಶ ಹೊಸಮನಿ, ಬಸವರಾಜ ದೊಡ್ಡಮನಿ, ರಾಜು ದೊಡ್ಡಮನಿ, ವಿಶ್ವನಾಥ ಹೊಸಮನಿ, ಮಲ್ಲು ಮುಷ್ಠಳ್ಳಿ, ಮಲ್ಲಿಕಾರ್ಜುನ ವಾಗಣಗೇರಾ, ಶರಣಪ್ಪ ವಾಗಣಗೇರಾ, ವೀರಭದ್ರ ತಳವಾರಗೇರಾ, ಗೋವರ್ಧನ ತೇಲ್ಕರ್, ಮಲ್ಲಿಕಾರ್ಜುನ ದೊಡ್ಡಮನಿ, ಹಣಮಂತ ತೇಲ್ಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.