ADVERTISEMENT

ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:42 IST
Last Updated 14 ಡಿಸೆಂಬರ್ 2025, 6:42 IST
ಕೆಂಭಾವಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಪಿಎಸಿಎಸ್ ಕೆಂಭಾವಿ-2 ಸಂಘದ ವತಿಯಿಂದ ನಡೆದ ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ನಿರ್ದೆಶಕ ಸುರೇಶ ಸಜ್ಜನ ಮಾತನಾಡಿದರು
ಕೆಂಭಾವಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಪಿಎಸಿಎಸ್ ಕೆಂಭಾವಿ-2 ಸಂಘದ ವತಿಯಿಂದ ನಡೆದ ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ನಿರ್ದೆಶಕ ಸುರೇಶ ಸಜ್ಜನ ಮಾತನಾಡಿದರು   

ಕೆಂಭಾವಿ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಪಿಎಸಿಎಸ್ ಕೆಂಭಾವಿ-2 ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಕಲಬುರರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ ನೂತನ ಅಧ್ಯಕ್ಷ ವಿಠಲ್ ವಿ ಯಾದವ್, ನಿರ್ದೇಶಕರಾದ ಸುರೇಶ್ ಸಜ್ಜನ, ಬಸವರಾಜ ಎಸ್ ಪಾಟೀಲ ಚಿಂಚೋಳಿ, ಪುರಸಭೆ ನೂತನ ಅಧ್ಯಕ್ಷೆ ಪ್ರೀಯಾ ರಾಮನಗೌಡ ಪೊಲೀಸ್‌ ಪಾಟೀಲ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪುರ, ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಬಾಪುಗೌಡ ಡಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ್ ಯಾದವ್ ಮಾತನಾಡಿ, ‘ಉತ್ತಮವಾಗಿ ಬ್ಯಾಂಕ್ ಅಭಿವೃದ್ಧಿ ಪಡಿಸುತ್ತೇವೆ. ರೈತರಿಗೆ ಎಲ್ಲರೀತಿಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಬ್ಯಾಂಕ್ ಕ್ರಿಯಾಶೀಲಾಗಿ ಇಡಲಾಗುವುದು’ ಎಂದರು.

ನಿರ್ದೇಶಕ ಸುರೇಶ ಆರ್ ಸಜ್ಜನ ಮಾತನಾಡಿ, ‘ಜಿಲ್ಲೆಯ ಪ್ರತಿಯೊಬ್ಬ ರೈತರಿಗೂ ಸಾಲಸೌಲಭ್ಯ ಸಿಗುವಂತೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಆರ್. ಪವನ್ ಕುಮಾರ್ ರಾಥೋಡ್, ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್‌ ಪಾಟೀಲ, ವಾಮನರಾವು ದೇಶಪಾಂಡೆ, ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪೊಲೀಸ್‌ ಪಾಟೀಲ, ಉಪಾಧ್ಯಕ್ಷ ತಿಪ್ಪಣ್ಣ ಡಿ.ಯಾಳಗಿ, ಖಾಜಾಪಟೇಲ್ ಕಾಚೂರ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಸವರಾಜ ಕುಂಬಾರ ಕರಡಕಲ್, ಪಿಎಸಿಎಸ್ ಸಂಘದ ನಿರ್ದೇಶಕ ಶರಣು ಅರಕೇರಾ, ಮಾರುತಿ ಅರ್ ಭೋವಿ, ಮಂಜುನಾಥ ಚೌಕ, ಸಿದ್ದನಗೌಡ ಮಾಲಿ ಪಾಟೀಲ್ ಐಕೂರ ಹಾಗೂ ಪಟ್ಟಣದ ಪ್ರಮುಖರು ಹಾಗೂ ಸಂಘದ ರೈತ ಸದಸ್ಯರು ಹಾಗೂ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು. ವೆಂಕನಗೌಡ ಪಾಟೀಲ ಮಾಲಹಳ್ಳಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ರಂಗಪ್ಪ ವಡ್ಡರ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.