ADVERTISEMENT

ಯಾದಗಿರಿ: ಸತ್ತ ಜಲಚರಗಳ ವಾಸನೆಗೆ ಪ್ರಯಾಣಿಕರು ಹೈರಾಣು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:38 IST
Last Updated 5 ಅಕ್ಟೋಬರ್ 2025, 2:38 IST
ವಡಗೇರಾ ಕಳೆದ ವಾರ ಭೀಮಾ ನದಿಯ ಪ್ರವಾಹ ಬಂದಾಗ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಪ್ರವಾಹದ ನೀರು ಸಂಗ್ರಹವಾಗಿರುವದು ( ಸಂಗ್ರಹ ಚಿತ್ರ)
ವಡಗೇರಾ ಕಳೆದ ವಾರ ಭೀಮಾ ನದಿಯ ಪ್ರವಾಹ ಬಂದಾಗ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಪ್ರವಾಹದ ನೀರು ಸಂಗ್ರಹವಾಗಿರುವದು ( ಸಂಗ್ರಹ ಚಿತ್ರ)   

ವಡಗೇರಾ: ತಾಲ್ಲೂಕಿನ ಭೀಮಾ ಬ್ರಿಡ್ಜ್‌ ಕಂ ಬ್ಯಾರೇಜ್‌ ಸುತ್ತಮುತ್ತ ಹಾಗೂ ವಡಗೇರಾ ಕ್ರಾಸ್ ದಿಂದ ನಾಯ್ಕಲ್ ಗ್ರಾಮದ ಬೈಪಾಸ್ ಹೆದ್ದಾರಿವರೆಗೆ ಮೀನುಗಳು, ಕ್ರಿಮಿಕೀಟಗಳು ಜಲಚರಗಳು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿರುವುದರಿಂದ ರಾಜ್ಯ ಹೆದ್ದಾರಿ ನಾರುತ್ತಿದೆ ಎಂದು ಗ್ರಾಮಸ್ಥರು, ಪ್ರಯಾಣಿಕರು ದೂರಿದ್ದಾರೆ.

ಭೀಮಾ ನದಿಯ ಪ್ರವಾಹ ಇಳಿಮುಖವಾಗುತ್ತಿರುವ ಹಿನ್ನಲ್ಲೆ ಜಮೀನುಗಳಲ್ಲಿ ಹಾಗೂ ಹೆದ್ದಾರಿಯ ಸುತ್ತಮುತ್ತ ಜಲಚರಗಳು ಸತ್ತು ಬಿದ್ದಿರುವುದರಿಂದ ರೋಗ ಹರಡುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ಯಾದಗಿರಿ-ಶಹಾಪುರ ಹೆದ್ದಾರಿಯ ಮೇಲೆ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಮೂಗಿಗೆ ಕರವಸ್ತ್ರವನ್ನು ಕಟ್ಟಿಕೊಂಡು ಸಂಚಾರ ಮಾಡುವಂತಾಗಿದೆ. ಪ್ರವಾಹದಲ್ಲಿ ಜಲಚರಗಳು ಹರಿದು ಬಂದಿದ್ದವು. ಈಗ ಪ್ರವಾಹ ಇಳಿಮುಖವಾದ ಹಿನ್ನಲೆ ಸತ್ತಿವೆ. ಇದರಿಂದ ವಾಸನೆ ಬರುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಗ್ರಾಪಂಗಳಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ವಾತಾವರಣ ಸ್ವಚ್ಚಗೊಳಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.