ಶಹಾಪುರ: ಲೋಕಸಭೆಯಲ್ಲಿ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಮುಸ್ಲಿಂ ಒಕ್ಕೂಟದ ಸದಸ್ಯರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
‘ಮುಸ್ಲಿಂ ಸಮುದಾಯದವರು ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಅಲ್ಲಾಹನ ಹೆಸರಿನಲ್ಲಿ ತಮ್ಮ ಸ್ಥಿರ ಹಾಗೂ ಚರ ಆಸ್ತಿಗಳನ್ನು ದಾನ ಮಾಡಿರುವಾಗ ವಕ್ಫ್ ಆಸ್ತಿಯನ್ನು ಮತ್ತೆ ಮಾರಾಟ ಮಾಡಲು ಮತ್ತು ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಭಟನಕಾರರು ಎಂದರು.
‘ಕೇಂದ್ರ ಸರ್ಕಾರ ಕಳೆದ ವರ್ಷ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಸಂಸತ್ತಿನಲ್ಲಿ ಕೋಲಾಹಲವೆದ್ದಾಗ ಆಡಳಿತ ಮಂಡಳಿಯ 16 ಸದಸ್ಯರು ಮತ್ತು ವಿರೋಧ ಪಕ್ಷಗಳ 15 ಜನರ ಸಮಿತಿಯನ್ನು ನೇಮಿಸಿತ್ತು. ಸಮಿತಿ ನೀಡಿದ ಅಸಂವಿಧಾನಿಕ ವರದಿಯನ್ನು ಅನುಸರಿಸಿ ವಕ್ಫ್ ತಿದ್ದುಪಡಿ ಮಾಡಿ ಅಂಗೀಕರಿಸಿದೆ’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು ತಿಳಿಸಿದರು.
ಸಮುದಾಯದ ಮುಖಂಡರಾದ ಸೈಯದ್ ಸೈಯದುದ್ಧೀನ್ ಖಾದ್ರಿ, ಸೈಯದ್ ಇಸಾಕ ಹುಸೇನ್, ಮಹ್ಮದ್ ರಫೀಕ್ ಚೌದ್ರಿ, ಸೈಯದ್ ಪಾಶಾ ಪಟೇಲ್, ಶೇಖ್ ಕಲೀಮ್ ತವಕಲಿ, ನಬಿಸಾಬ್ ಪಟೇಲ್ ಶಿರವಾಳ, ಸಣ್ಣ ನಿಂಗಣ್ಣ ನಾಯ್ಕೋಡಿ, ಸೈಯದ್ ಶಫೀವುದ್ಧೀನ್ ಸರಮಸ್ತ, ಅಬ್ದುಲ್ ರಹೆಮಾನ್, ಸೈಯದ್ ಚಾಂದ್ ಪಟೇಲ್, ಮಹಾದೇವಪ್ಪ ಸಾಲಿಮನಿ, ಸೈಯದ್ ಅಸದ್ ಹುಸೇನ್ ಗೋಗಿ, ಮಹ್ಮದ್ ಯೂನೂಸ್ ಅನೋರಿ, ಸೈಯದ್ ಮುಸ್ತಫಾ ದರ್ಬಾನ್, ಶಿವುಕುಮಾರ ತಳವಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.