ADVERTISEMENT

ವಚನ ಸಾಹಿತ್ಯಕ್ಕೆ ಭದ್ರವಾದ ಬುನಾದಿ; ಶಾಸಕ ರಾಜೂಗೌಡ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:09 IST
Last Updated 7 ಏಪ್ರಿಲ್ 2022, 4:09 IST
ಹುಣಸಗಿಯ ಕೊಡೇಕಲ್ಲ ಗ್ರಾಮದಲ್ಲಿ ನೇಕಾರರ ಒಕ್ಕೂಟ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ರಾಜೂಗೌಡ ಮಾತನಾಡಿದರು
ಹುಣಸಗಿಯ ಕೊಡೇಕಲ್ಲ ಗ್ರಾಮದಲ್ಲಿ ನೇಕಾರರ ಒಕ್ಕೂಟ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ರಾಜೂಗೌಡ ಮಾತನಾಡಿದರು   

ಕೊಡೇಕಲ್ಲ (ಹುಣಸಗಿ): ತಮ್ಮ ಕಾಯಕ ನಿಷ್ಟಯೊಂದಿಗೆ ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ ದೇವರ ದಾಸಿಮಯ್ಯನವರು ಶ್ರೇಷ್ಠರು ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದರು.

ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲ್ಲೂಕು ನೇಕಾರರ ಒಕ್ಕೂಟ ವತಿಯಿಂದ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮನಾಥನನ್ನು ಆರಾಧಿಸುತ್ತಾ ವಚನಗಳ ಮೂಲಕ ಸಮಾಜ ಸುಧಾ ರಣೆಗೆ ಒತ್ತು ನೀಡಿ ದ್ದರು. ದಾಸಿಮ ಯ್ಯನವರ ವಚನಗಳು ಪ್ರತಿಯೊಬ್ಬರ ಬದುಕಿಗೆ ಸಹಕಾರಿಯಾಗಿವೆ. ಎಲ್ಲಾ ವರ್ಗದವರಿಗೂ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ಬರೆದಿದ್ದಾರೆ ಎಂದರು.

ADVERTISEMENT

ಮುದಗಲ್ಲನ ಕಲ್ಯಾಣ ಆಶ್ರ ಮದ ಮಹಾಂತ ಸ್ವಾಮೀಜಿ ಮಾತ ನಾಡಿ, ಕಲ್ಯಾಣ ಕರ್ನಾಟಕದ ನೆಲ ಅತ್ಯಂತ ಪವಿತ್ರವಾದದ್ದು. ಇಲ್ಲಿ ಬಸ ವಾದಿ ಶರಣರು, ಸಂತರು ಜನಿಸಿದ ಪಾವನ ಭೂಮಿ ಇದು. ಇಂದು ನಾವೆಲ್ಲರೂ ಪರಸ್ಪರ ಕಷ್ಟ ಸುಖ ಗಳಲ್ಲಿ ಭಾಗಿಯಾಗುತ್ತಾ, ನಿಷ್ಕ ಲ್ಮಷ ಕಾಯಕದೊಂದಿಗೆ ಒಳ್ಳೆಯ ಕಾರ್ಯ ಗಳಲ್ಲಿ ನಿರತರಾಗುವಂತೆ ತಿಳಿಸಿದರು.

ಕೊಡೇಕಲ್ಲ ಬಸವಪೀಠದ ಪೀಠಾಧಿಪತಿ ವೃಷಬೇಂದ್ರ ಅಪ್ಪ ಸಾನಿಧ್ಯ ಸಾನಿಧ್ಯ ವಹಿಸಿದ್ದರು. ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ನೇತೃತ್ವವಹಿಸಿದ್ದರು.

ರಾಣಿ ರಂಗಮ್ಮ ಜಹಾಗೀರದಾರ, ರಾಜಾ ವೆಂಕಟಪ್ಪನಾಯಕ ಜಹಾಗೀರ ದಾರ, ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್.ಹಾವೇರಿ, ರಂಗನಾಥ ದೊರೆ, ಮೋಹನ ಪಾಟೀಲ, ಉಪ ತಹಶೀಲ್ದಾರ್ ಬಸವರಾಜ ಬಿರಾದಾರ, ಪಿಎಸ್ಐ ಶ್ರೀಶೈಲ ಅಂಬಾಟೆ, ಸಂಗಪ್ಪ ಶಿಪುರ, ಗವಿಸಂಗಯ್ಯ ಪಂಜಗಲ್, ಸಿ.ಎಸ್. ಹಾವೇರಿ, ಬಸವರಾಜ ಹೊಸಪೂಜಾರಿ, ಎಸ್.ಬಿ.ಅಡ್ಡಿ, ತಿಪ್ಪಣ್ಣ ದ್ಯಾಮನಾಳ, ಪ್ರಭು ದ್ಯಾಮನಾಳ, ಬಸವರಾಜ ಗೋನಾಟ್ಲ, ಬಸವರಾಜ ಜಾಲಿಗಿಡದ ಸಂಗು, ಶಾಂತು ಇದ್ದರು.

ಸಾಧಕರನ್ನು ಸನ್ಮಾನಿಸಲಾಯಿತು. ಬಸವರಾಜ ಭದ್ರಗೋಳ ಸ್ವಾಗತಿಸಿದರು. ಕೆ.ಬಿ.ಗಡ್ಡದ್ ನಿರೂಪಿಸಿದರು. ಬಿ.ಎಸ್.ಕೆಂಡದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.