ADVERTISEMENT

ಯಾದಗಿರಿ: ನಗರದ ವಿವಿಧೆಡೆ ದೇವಿ ಮೂರ್ತಿ ಪ್ರತಿಷ್ಠಾಪನೆ

ನವರಾತ್ರಿ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 14:24 IST
Last Updated 30 ಸೆಪ್ಟೆಂಬರ್ 2019, 14:24 IST
ಬೋವಿವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ದುರ್ಗಾದೇವಿಗೆ ಅಲಂಕಾರ ಮಾಡಿರುವುದು
ಬೋವಿವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ದುರ್ಗಾದೇವಿಗೆ ಅಲಂಕಾರ ಮಾಡಿರುವುದು   

ಯಾದಗಿರಿ: ನಗರದ ವಿವಿಧೆಡೆ ದಸರಾ ಹಬ್ಬದ ಅಂಗವಾಗಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ಟೇಷನ್ ಏರಿಯಾ, ಡಾ.ಬಾಬು ಜಗಜೀವನ ರಾಂ ನಗರ, ಶಪಾರಪೇಟ್, ಬೋವಿವಾಡ ನಗರ, ಕೋಟೆ ಬಳಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಸ್ಟೇಷನ್ ಏರಿಯಾದ ಶಿವಾಜಿನಗರದ ಬಳಿ ಕಳೆದ ಮೂವತ್ತು ವರ್ಷಗಳಿಂದ ಸರ್ಕಾರದ ನೆರವಿಲ್ಲದೆ ದಸರಾ ಆಚರಿಸಲಾಗುತ್ತಿದೆ. ಶಾಸ್ತ್ರಿ ವೃತ್ತದಿಂದ ರೈಲು ನಿಲ್ದಾಣ ಹಾಗೂ ದೇವಸ್ಥಾನದ ವರೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ದಾಂಡೀಯಾ ಆಕರ್ಷಣೆ: ದಸರಾ ಹಬ್ಬದ ಅಂಗವಾಗಿ ದಾಂಡೀಯಾ ನೃತ್ಯ ಕಾರ್ಯಕ್ರಮ ಆಕರ್ಷಣೆಯಾಗಿದೆ. ದೇವಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 12ರ ತನಕ ನಡೆಸಲಾಗುತ್ತಿದೆ.

7 ದಿನ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಕೋಲಾಟ ಸ್ಪರ್ಧೆ ಆಯೋಜಿಸಲಾಗುತ್ತದೆ. ಆಯುಧ ಪೂಜೆ ದಿನ ಧರ್ಮ ಸಭೆ ಆಯೋಜಿಸಲಾಗುತ್ತದೆ. ಆ ದಿನ ಅಬ್ಬೆತುಮಕೂರಿನ ಗಂಗಾಧರ ಸ್ವಾಮೀಜಿಯಿಂದ ಪ್ರವಚನ ಕಾರ್ಯಕ್ರಮ ನಡೆಸಲಾಗುತ್ತದೆ. ವಿಜಯ ದಶಮಿ ದಿನ ರಥದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸ್ಟೇಷನ್ ಪ್ರದೇಶದಿಂದ ಕೋಟೆ ಬಳಿ ಇರುವ ಬನ್ನಿ ಗಿಡದವರೆಗೂ ಮೆರವಣಿಗೆ ನಡೆಯಲಿದೆ.

ADVERTISEMENT

ನಂತರ 500ಕ್ಕೂ ಹೆಚ್ಚು ಭಕ್ತರು ತುಳಜಾಪುರದ ತುಳಜಾಭವಾನಿ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಾರೆ.

‘9 ದಿನಗಳ ವರೆಗೆ ದೇವಿಯನ್ನು ಪ್ರತಿಷ್ಠಾಪಿಸಿ ಖಂಡೇ ಪೂಜೆ ದಿನ ವಿಜೃಂಭಣೆಯಿಂದ ದೇವಿ ಮೆರವಣಿಗೆ ಮಾಡಲಾಗುತ್ತದೆ. ಕೆಲ ಕಡೆ ದೇವಿ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಆದರೆ, ನಾವು ವಿಸರ್ಜನೆ ಮಾಡುವುದಿಲ್ಲ. ಮೂರ್ತಿ ಹಳೆಯಾದರೆ ಮಾತ್ರ ಅದನ್ನು ಬದಲಾಯಿಸುತ್ತೇವೆ’ ಎಂದು ದೇವಿ ಭಕ್ತರಾದ ನಾರಾಯಣ ರಾವ್ ಚವ್ಹಾಣ್, ರಘುನಾಥ ಚವ್ಹಾಣ್‌ ಹೇಳುತ್ತಾರೆ.

ಭುವನೇಶ್ವರಿ ಬೆಟ್ಟ:ನಗರದ ಕೋಟೆ ಪ್ರದೇಶದಲ್ಲಿಭುವನೇಶ್ವರಿ ದೇವಿ ಬೆಟ್ಟದಲ್ಲಿ ದಸರಾ ಹಬ್ಬದ ಅಂಗವಾಗಿಆಕ್ಟೋಬರ್‌ 1ರಿಂದ 5ರವರೆಗೆ ಕನ್ನಡದಲ್ಲಿ ದೇವಿ ಪಾರಾಯಣ, ಲಲಿತಾ ಸಹಸ್ರ ನಾಮಾವಳಿ, 2ರಂದು ದೇವಿ ಸಪ್ತಪತಿ ಪಾರಾಯಣ, 6 ರಂದು ದುರ್ಗಾಷ್ಟಮಿ ದಿನದಂದು ಗಣೇಶನಿಗೆ ಸರ್ವನಿಷ್ಠೆ ನಿವಾರಣೆಗೆ 38ನೇ ವರ್ಷದ ಗಣಹೋಮನೆರವೇರಲಿದೆ. ಅಂದು ರಾತ್ರಿ ನರಸಿಂಹ ಭಜನಾ ಮಂಡಳಿಇವರಿಂದ ಭಕ್ತಿ ಪ್ರಧಾನ ಗಾಯನ ನಡೆಯಲಿದೆ.7 ರಂದು 38 ನೇ ವರ್ಷದ ಶತಚಂಡಿ ಯಜ್ಞದ ದರ್ಶನ ನಡೆಲಿದೆ. ಆಚಾರ್ಯ ಲಕ್ಷ್ಮಿಕಾಂತ ಅಲ್ಲೂರ, ಶಿವಾನಂದ ಪುರೋಹಿತ ನಾರಾಯಣಪೇಟ್‌ ಪಂಡಿತರ ಪೌರೋಹಿತ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಲಾಗಿದೆ.

ಅಲ್ಲದೆ ಸೆಪ್ಟೆಂಬರ್ 30ರಿಂದ ನವರಾತ್ರಿ ವರೆಗೆ ಬೆಳಿಗ್ಗೆ 9ರಿಂದ ವಿವೇಕ ಜಾಗೃತ ಬಳಗದ ಪ್ರತಿಭಾ ಎಸ್‌.ಸೋನಾರ್ ಇವರಿಂದ ದೇವಿ ಸ್ತುತಿಗಳು ಜರಗುವವು.ತತ್ವಪದ ಗಾಯನ, ವಚನ ಗಾಯನ, ಜಾನಪದ ಗಾಯನ, ಭಕ್ತಿಗೀತೆಗಳ ಗಾಯನ, ಮಕ್ಕಳ ನೃತ್ಯ ನವರಾತ್ರಿ ವೈಭವ, ಪುಸ್ತಕ ಬಿಡಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.