
ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 22ನೇ ಶ್ರೀಶೈಲಂ ಪಾದಯಾತ್ರೆಯ ಮೂಲಕ ತೆರಳಿದ ಭಕ್ತರು 11 ದಿನಗಳ ಪಾದಯಾತ್ರೆಯ ನಂತರ ಮಂಗಳವಾರ ಆಂಧ್ರಪ್ರದೇಶದ ಶ್ರೀಶೈಲದ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ತಲುಪಿದ್ದಾರೆ ಎಂದು ಸಮಿತಿ ತಿಳಿಸಿದೆ.
ದಾರಿಯುದ್ದಕ್ಕೂ ಭಜನೆ, ಶಿವನಾಮ ಕೀರ್ತನೆಯೊಂದಿಗೆ ಪಾದಯಾತ್ರೆ ಸಾಗಿದ್ದು, ಮಂಗಳವಾರ ಭ್ರಮರಾಂಭ ದೇವಸ್ಥಾನ, ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಹಾಗೂ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಗಳ ದರ್ಶನ ಪಡೆದಿದ್ದು, ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ನಮ್ಮಲ್ಲಿ ಸಕಾರಾತ್ಮಕತೆ ಹೆಚ್ಚಿ, ಆತ್ಮಶುದ್ಧಿಯಾಗುತ್ತದೆ. ಜತೆಗೆ ಪಾದಯಾತ್ರೆಯಿಂದ ಆರೋಗ್ಯವೂ ಲಭಿಸಲಿದೆ ಎಂದು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶರಣು ಗದ್ದುಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.