ADVERTISEMENT

‘ಕನಸುಗಳನ್ನು ಮಕ್ಕಳ ಮೇಲೆ ಒತ್ತಾಯದಿಂದ ಹೇರಬೇಡಿ’

ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ ವಸತಿ ಶಾಲೆಗಳ ವಿಜ್ಞಾನ ಮೇಳದಲ್ಲಿ ಶಾಸಕ ಮುದ್ನಾಳ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 16:05 IST
Last Updated 16 ಜನವರಿ 2023, 16:05 IST
ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಯಾದಗಿರಿ ವಿಧಾನಸಭಾ ಕ್ಷೇತ್ರದ ವಸತಿ ಶಾಲೆಗಳ ವಿಜ್ಞಾನ ಮೇಳಕ್ಕೆ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು
ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಯಾದಗಿರಿ ವಿಧಾನಸಭಾ ಕ್ಷೇತ್ರದ ವಸತಿ ಶಾಲೆಗಳ ವಿಜ್ಞಾನ ಮೇಳಕ್ಕೆ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು   

ಯಾದಗಿರಿ: ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಒತ್ತಾಯದಿಂದ ಹೇರಬೇಡಿ. ಅವರ ಪಾಲಿಗೆ ಅವರನ್ನು ಬಿಟ್ಟುಬಿಡಿ ಅವರಿಗೆ ಅವರದೆ ಆದ ಕನಸುಗಳಿವೆ. ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಪಾಲಕರು ಅವಕಾಶ ಕಲ್ಪಿಸಬೇಕು ಎಂದು ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಪಾಲಕರಿಗೆ ಕಿವಿ ಮಾತು ಹೇಳಿದರು.

ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಯಾದಗಿರಿ ವಿಧಾನಸಭಾ ಕ್ಷೇತ್ರದ ವಸತಿ ಶಾಲೆಗಳ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದಲ್ಲಿಯೇ ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನವಿದೆ. ಆದರೆ, ಆಗೀನ ಬರಹಗಾರರು ನಮ್ಮ ಇತಿಹಾಸವನ್ನು ತಿರುಚಿ ಬರೆದಿರುವುದರಿಂದ ಭಾರತದ ಹೆಸರು ವಿಶ್ವ ಮಟ್ಟದಲ್ಲಿ ಬೆಳೆಯಲಿಲ್ಲ. ನಮ್ಮ ಪೂರ್ವಜರು ನಾಟಿ ಪದ್ದತಿ ಮೂಲಕ ಅನೇಕ ರೋಗ ರುಜಿಗಳನ್ನು ಗುಣ ಪಡಿಸುತಿದ್ದರು. ಇಂದು 21ನೇ ಶತಮಾನದಲ್ಲಿಯೂ ನಮ್ಮ ದೇಶ ಕೋವಿಡ್‌ ಸಮಯದಲ್ಲಿ ಲಸಿಕೆ ಕಂಡು ಹಿಡಿದು ದೇಶ ವಾಸಿಗಳ ಜೀವ ಕಾಪಾಡಿದಲ್ಲದೆ ವಿದೇಶಕ್ಕೂ ಕೋವಿಡ್‌ ಲಸಿಕೆಯನ್ನು ರಪ್ತು ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಸುರೇಶ ತಡಿಬಿಡಿ, ಮಕ್ಕಳಲ್ಲಿ ವೈಚಾರಿಕತೆಯ, ವೈಜ್ಞಾನಿಕತೆಯ ಭಾವನೆ ಬೆಳೆಸಲು ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಆಸಕ್ತಿಯನ್ನು ಹೊಂದಲು ಸರ್ಕಾರವು ಇಂತಹ ವಿಜ್ಞಾನ ಮೇಳಗಳನ್ನು ಆಯೋಜಿಸಿದೆ. ಅದಕ್ಕಾಗಿ ವಿಜ್ಞಾನ ಬೋಧಿಸುವ ಶಿಕ್ಷಕರು ಮಕ್ಕಳಲ್ಲಿ ಇರುವ ಸೂಕ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಮುಂದೆ ಅವರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಡಾ. ಮರಿಯಪ್ಪ ನಾಟೇಕಾರ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ನರಸಮ್ಮ ಬುಸ್ಸೇನಿ, ಉಪಾಧ್ಯಕ್ಷ ಅಶೋಕ ಸಾಹು ಕರಣಗಿ, ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಚೆನ್ನೂರ, ಶಂಕ್ರಣ್ಣ ಸಾಹು ಕರಣಗಿ, ಪ್ರಾಂಶುಪಾಲ ನಾಗರಡ್ಡಿ, ಮಲ್ಲಿಕಾರ್ಜುನ ಪಾಟೀಲ, ಭೀಮರಾಯ ಪಾಟೀಲ, ಸುರಯ್ಯಬೇಗಂ, ನೇಹಾ ಅಂಜುಮ್, ಮಲ್ಲಿಕಾರ್ಜುನ ಪಾಟೀಲ, ಶಿಕ್ಷಕರಾದ ರಘುಪತಿರಡ್ಡಿ, ಅಪ್ಪಾಸಾಬ ಬಡಿಗೇರ, ಹಣಮಂತ್ರಾಯ, ಪ್ರತಿಭಾ, ಬೀರಪ್ಪ ಸಂಕೀನ್, ಭಾಗ್ಯಶ್ರೀ, ಭರತೇಶ್ವರಿ, ನೀತಿ ಪಾಟೀಲ, ಬಂಗಾರೆಮ್ಮ, ವಿವಿಧ ವಸತಿ ಶಾಲೆಯ ಮಕ್ಕಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.