ADVERTISEMENT

ಕಲ್ಯಾಣ ಕರ್ನಾಟಕದವರನ್ನು ಕಡೆಗಣಿಸಬೇಡಿ: ಶಾಸಕ ರಾಜೂಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 1:33 IST
Last Updated 27 ಜನವರಿ 2021, 1:33 IST
ರಾಜೂಗೌಡ
ರಾಜೂಗೌಡ   

ಯಾದಗಿರಿ: ‘ಕಲ್ಯಾಣ ಕರ್ನಾಟಕ ಭಾಗದ ಶಾಸಕರುಸಂಭಾವಿತರುಎಂದುಕಡೆಗಣಿಸಬೇಡಿ. ಈ ಭಾಗಕ್ಕೆ ಅನ್ಯಾಯ ಆದ ಕುರಿತು ವರಿಷ್ಠರಿಗೆ ತಿಳಿಸಿದ್ದೇವೆ’ ಎಂದುಒಳಚರಂಡಿ ಹಾಗೂ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ರಾಜೂಗೌಡ ಹೇಳಿದರು.

‘ನಮಗೆ ಅಸಮಾಧಾನ ಇದ್ದರೆನಾವು ಬಹಿರಂಗವಾಗಿ ಮಾತಾನಾಡುತ್ತೇವೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾಹೇಬರ ಜತೆ ಜಗಳ ಮಾಡುವುದಾದರೆ ಅವರ ಮನೆಗೆ ಹೋಗಿ ಮಾಡುತ್ತೇವೆ.ಅಲ್ಲಿ ಇಲ್ಲಿ ಸಭೆ ಮಾಡುವುದಿಲ್ಲ’ ಎಂದರು.

ನಿಗಮದ ಮೇಲೆ ಕಣ್ಣಿಟ್ಟಿದ್ದಾರೆ: ‘ಯಾರೋ ನನ್ನ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿಅವರೇ ನನ್ನ ರಾಜೀನಾಮೆ ವದಂತಿ ಹರಡಿದ್ದಾರೆ’ ಎಂದು ರಾಜೀನಾಮೆ ಕುರಿತು ಸ್ಪಷ್ಟನೆ ನೀಡಿದರು.

ADVERTISEMENT

‘ರಾಜೀನಾಮೆ ವದಂತಿಗೆ ಗಮನ ಕೊಡಬೇಡಿ. ನೇರವಾಗಿ ನನ್ನಿಂದ ಮಾಹಿತಿ ಪಡೆಯಿರಿ.ಇನ್ನೊಬ್ಬರ ಮೂಲಕ ಸಂದೇಶ ನೀಡುವ ಮಾತೇ ಇಲ್ಲ. ನಮ್ಮದು ನೇರಾ ನೇರಾ’ ಎಂದರು.

ವರಿಷ್ಠರ ಆದೇಶದ ಮೇರೆಗೆ ಸಿಂಗ್‌ ಭೇಟಿ: ‘ಪಕ್ಷಕ್ಕೆ ಬರುವಾಗ ಯಾವುದೇ ಷರತ್ತು ಇಲ್ಲದೆ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಖಾತೆ ಬದಲಾವಣೆ ಮಾಡಿರುವುದರಿಂದ ಅಸಮಾಧಾನವಾಗಿಲ್ಲ.

ವರಿಷ್ಠರ ಆದೇಶದ ಮೇರೆಗೆ ಆನಂದ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದೇನೆ’ ಎಂದರು.

ವಿಜಯನಗರ ಜಿಲ್ಲೆ ಘೋಷಣೆ ಮಾಡಿದ ನಂತರ ನನಗೆ ಮಂತ್ರಿ ಸ್ಥಾನ ಬೇಡ ಅಂದಿದ್ದರು. ಮುಖ್ಯಮಂತ್ರಿಯವರೆ ಮಂತ್ರಿಯಾಗಿ ಮುಂದುವರಿಯುವಂತೆ ಹೇಳಿದ್ದರು ಎಂದರು.

‘ಯಾರು ನಿಮ್ಮ ಮೇಲೆ ಒತ್ತಡ ತರುತ್ತಾರೆ ಅವರಿಗೆ ಸಚಿವಸ್ಥಾನ ನೀಡಬೇಡಿ.ಯಾರು ಸಂಭಾವಿತರೋ ಅಂತವರಿಗೆ ನಿಮ್ಮ ಆಶೀರ್ವಾದ ಇರಲಿ ಎಂದುಮುಖ್ಯಮಂತ್ರಿಯಡಿಯೂರಪ್ಪ ಅವರಲ್ಲಿ ಈ ಮೂಲಕ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.