ಹುಣಸಗಿ (ಯಾದಗಿರಿ ಜಿಲ್ಲೆ): ‘ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ 12.30ಕ್ಕೆ ಲಘು ಭೂಕಂಪನದ ಅನುಭವ ಆಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.
‘ಈ ಹಿಂದೆಯೂ ಎರಡು ಬಾರಿ ಲಘು ಭೂಕಂಪ ಆಗಿತ್ತು. ಜನ, ಜಾನುವಾರು, ಮನೆಗೆ ಹಾನಿಯಾಗಿಲ್ಲ. ಭೂಕಂಪಕದ ತೀವ್ರತೆಗೆ ಮನೆಯ ಪಾತ್ರೆಗಳು ಮಾತ್ರ ಬಿದ್ದಿವೆ’ ಎಂದು ಮತ್ತೊಬ್ಬ ಗ್ರಾಮಸ್ಥರು ಹೇಳಿದರು.
ತಹಶೀಲ್ದಾರ್ ಎಂ.ಬಸವರಾಜ್ ಮಾತನಾಡಿ, ‘ಗಣಿ ಅಥವಾ ಸ್ಫೋಟಕದಂತಹ ಸದ್ದುಗಳಿಗೆ ಭೂಮಿ ಮೇಲ್ಮೈ ಪದರು ಅಲುಗಾಡುತ್ತದೆ’ ಎಂದರು. ಕಂಪನದ ಬಗ್ಗೆ ಸ್ಪಷ್ಟತೆ ನೀಡಲಿಲ್ಲ. ಕಂದಾಯ ನಿರೀಕ್ಷಕ ರವಿಕುಮಾರ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.