ADVERTISEMENT

ಚುನಾವಣೆ: ಶಾಂತಿಯುತ ಮತದಾನ

ಶಹಾಪುರ ನಗರಸಭೆ, 2 ತಾಲ್ಲೂಕು ಪಂಚಾಯಿತಿ, 1 ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 29 ಮೇ 2019, 20:39 IST
Last Updated 29 ಮೇ 2019, 20:39 IST

ಯಾದಗಿರಿ: ಶಹಾಪುರ ನಗರಸಭೆ ಚುನಾವಣೆ ಮತ್ತು ಸುರಪುರ ತಾಲ್ಲೂಕು ಪಂಚಾಯಿತಿ 2 ಕ್ಷೇತ್ರ ಹಾಗೂ ಕಾಮನಟಗಿ ಗ್ರಾಮ ಪಂಚಾಯಿತಿ 1 ಕ್ಷೇತ್ರದ ಉಪ ಚುನಾವಣೆ ಬುಧವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು.

ಐಎನ್‍ಸಿ 29, ಬಿಜೆಪಿ 31, ಜೆಡಿಎಸ್ 25, ಎಸ್‍ಡಿಪಿಐ 2, ಪಕ್ಷೇತರರು 4 ಜನ ಸೇರಿದಂತೆ ಒಟ್ಟು 91 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದರು. ಶೇಕಡ 61.59 ಮತದಾನವಾಗಿದೆ.

ಸುರಪುರ ತಾಲ್ಲೂಕಿನ ಹೆಬ್ಬಾಳ (ಬಿ) ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್–1, ಬಿಜೆಪಿ–1, ಬಿಎಸ್‌ಪಿ 1 ಅಭ್ಯರ್ಥಿ ಸ್ಪರ್ಧಾ ಕಣದಲ್ಲಿದ್ದರು. ಗೆದ್ದಲಮರಿ ತಾಲ್ಲೂಕು ಪಂಚಾಯಿತಿ ಚುನಾವಣಾ ಕಣದಲ್ಲಿ ಐಎನ್‍ಸಿ ಮತ್ತು ಬಿಜೆಪಿ ಅಭ್ಯರ್ಥಿಗಳು ಇದ್ದರು. ಕಾಮನಟಗಿ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಇಬ್ಬರು ಸ್ಪರ್ಧಿಸಿದ್ದಾರೆ.

ಹೆಬ್ಬಾಳ (ಬಿ) ಶೇಕಡ 49.02, ಗೆದ್ದಲಮರಿ ಶೇಕಡ 55.52 ಹಾಗೂ ಕಾಮನಟಗಿ ಶೇಕಡ 55.95 ರಷ್ಟು ಮತದಾನವಾಗಿದೆ.

ADVERTISEMENT

ಮತದಾನ ಕಾರ್ಯಕ್ಕಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.