ADVERTISEMENT

ಬೀದಿಬದಿ ವ್ಯಾಪಾರಸ್ಥರಿಗೆ ಸೌಲಭ್ಯ ಕಲ್ಪಿಸುವೆ: ಕಾಂಗ್ರೆಸ್ ಮುಖಂಡ ಧನರಾಜ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:18 IST
Last Updated 25 ನವೆಂಬರ್ 2024, 14:18 IST
ಬಸವಕಲ್ಯಾಣದಲ್ಲಿ ಈಚೆಗೆ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ಸಂಘದ ನೂತನ ಪದಾಧಿಕಾರಿಗಳನ್ನು ಮುಖಂಡ ಧನರಾಜ ತಾಳಂಪಳ್ಳಿ ಸನ್ಮಾನಿಸಿದರು. ಮನೋಹರ ಮೈಸೆ, ಅರ್ಜುನ ಕನಕ, ಪಿಂಟು ಕಾಂಬಳೆ ಉಪಸ್ಥಿತರಿದ್ದರು
ಬಸವಕಲ್ಯಾಣದಲ್ಲಿ ಈಚೆಗೆ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ಸಂಘದ ನೂತನ ಪದಾಧಿಕಾರಿಗಳನ್ನು ಮುಖಂಡ ಧನರಾಜ ತಾಳಂಪಳ್ಳಿ ಸನ್ಮಾನಿಸಿದರು. ಮನೋಹರ ಮೈಸೆ, ಅರ್ಜುನ ಕನಕ, ಪಿಂಟು ಕಾಂಬಳೆ ಉಪಸ್ಥಿತರಿದ್ದರು   

ಬಸವಕಲ್ಯಾಣ: ‘ಬೀದಿಬದಿ ವ್ಯಾಪಾರಸ್ಥರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಅವರು ಆರ್ಥಿಕವಾಗಿ ಸಬಲರಾಗಲು ಸಹಕರಿಸಲಾಗುವುದು' ಎಂದು ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಹೇಳಿದ್ದಾರೆ.

ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೀದಿಬದಿ ವ್ಯಾಪಾರಸ್ಥರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಸೇವೆಗಾಗಿಯೇ ಕಚೇರಿ ಆರಂಭಿಸಿ ಕಂಪ್ಯೂಟರ್ ವ್ಯವಸ್ಥೆ ಮಾಡಿದ್ದೇನೆ. ಆದ್ದರಿಂದ ಅಗತ್ಯವಿದ್ದವರು ಸರ್ಕಾರದ ಯಾವುದೇ ಕೆಲಸ ಕಾರ್ಯಗಳಿದ್ದರೂ ಇಲ್ಲಿಂದ ಅರ್ಜಿ ತುಂಬಲು ವ್ಯವಸ್ಥೆ ಇದೆ. ವಯನಾಡಿನಲ್ಲಿನ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಗೆದ್ದಿದ್ದಾರೆ. ನಾನು ಕೂಡ ಆ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ವಹಿಸಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸಂಘಟನೆ ಗಟ್ಟಿಗೊಳಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಅಗತ್ಯವಿದೆ. ಜನಸಾಮಾನ್ಯರ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಯತ್ನಿಸುತ್ತೇವೆ' ಎಂದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಅರ್ಜುನ ಕನಕ ಮಾತನಾಡಿದರು. ಪ್ರಮುಖರಾದ ಮನೋಹರ ಮೈಸೆ, ರಾಜನ್ ಚೌಧರಿ, ಬಂಡೆಪ್ಪ ಮೇತ್ರೆ, ಸೇವಾದಳದ ಅಧ್ಯಕ್ಷ ಸದಾನಂದ ಹಳ್ಳೆ, ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಮೋರೆ, ತಾಲ್ಲೂಕು ಅಧ್ಯಕ್ಷ ಪಿಂಟು ಕಾಂಬಳೆ ಪ್ರತಾಪುರ, ಮಸ್ತಾನ ಪಟೇಲ್, ರಾಜೇಶ್ವರಿ ಮೋರೆ, ಖಾಜಾಸಾಬ್, ಸಾಗರ ರಾಯಗೋಳ, ಪಾಶಾ, ಕವಿರಾಜ, ಶ್ರೀದೇವಿ ಕೋರೆ, ನಾಗಮ್ಮ ಬ್ಯಾಡಗಿ, ಅರುಣಾ ಅರ್ಜುನ, ಶಾಹೀನ್ ಸುಲ್ತಾನಾ, ಬಸವರಾಜ ಘಾಳೆ, ಸುಭಾಷ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.