ಬಂಧನ (ಸಾಂದರ್ಭಿಕ ಚಿತ್ರ)
ವಡಗೇರಾ: ತಾಲ್ಲೂಕಿನ ಗುರುಸುಣಗಿ ಗ್ರಾಮದ ಹೊರವಲಯದಲ್ಲಿ ನಡೆದ ಗೋವುಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ 4 ಜನರನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ಮಹೇಬೂಬ್ ಅಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸ್ಸಾರ್ ಶಂಶುದ್ದೀನ್ ನಿಜಾಮಿ ಗುರಸುಣಗಿ, ಅಬ್ದುಲ್ ರಹೀಮ್ ಜಲಾಲಸಾಬ್ ಖುರೇಸಿ ಗುರಸುಣಗಿ, ಮಹೇಬೂಬ ಅಬ್ದುಲ್ ನಬಿ ಖುರೇಸಿ ಗುರುಸಣಗಿ, ಮಿರಾಜ್ ನಬಿಚಾಂದ್ ಸೂಗುರು, ಯಾಕೂಬ್ ಜಲಾಲ್ ಸಾಬ್ ಖುರೇಸಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೃತ್ಯಕ್ಕೆ ಬಳಕೆ ಮಾಡಿದ ಟಂಟಂ ವಾಹನ ಜತೆಗೆ 120ರಿಂದ 150 ಕೆ.ಜಿ ಮಾಂಸ, ಕತ್ತು ಸೀಳಿದ ಆಕಳು, ಮೂರು ಜೀವಂತ ಹಸುಗಳು, 16 ಗೋವಿನ ರುಂಡಗಳು, ಚರ್ಮ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಕೆ ಮಾಡಿದ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ಪಿಎಸ್‌ಐ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.