ADVERTISEMENT

ಕದರಾಪುರ ಗ್ರಾಮದಲ್ಲಿ ಬೆಂಕಿ ಅವಘಡ: 40 ಕ್ವಿಂಟಲ್ ಹತ್ತಿ ಭಸ್ಮ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 6:35 IST
Last Updated 25 ಫೆಬ್ರುವರಿ 2021, 6:35 IST
ವಡಗೇರಾ ತಾಲ್ಲೂಕಿನ ಕದರಾಪುರು ಗ್ರಾಮದ ಹೊಲದಲ್ಲಿ ಕೂಡಿಟ್ಟ ಹತ್ತಿಯ ರಾಶಿಯು ಬೆಂಕಿಯಿಂದ ಸುಟ್ಟಿರುವುದು.
ವಡಗೇರಾ ತಾಲ್ಲೂಕಿನ ಕದರಾಪುರು ಗ್ರಾಮದ ಹೊಲದಲ್ಲಿ ಕೂಡಿಟ್ಟ ಹತ್ತಿಯ ರಾಶಿಯು ಬೆಂಕಿಯಿಂದ ಸುಟ್ಟಿರುವುದು.   

ಕದರಾಪುರ (ವಡಗೇರಾ): ತಾಲ್ಲೂಕಿನ ಕದರಾಪುರ ಗ್ರಾಮದ ಚಂದ್ರಶೇಖರ ರುದ್ರಗೌಡ ಎಂಬುವವರ ಹೊಲದಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹೊಲದಲ್ಲಿ ಶೇಖರಿಸಿ ಇಟ್ಟಿದ್ದ ಸುಮಾರು 40 ಕ್ವಿಂಟಲ್ ಹತ್ತಿ ಸುಟ್ಟು ಹೋಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರು. ಆದರೆ, ಬೆಂಕಿ ಹೆಚ್ಚಾಗಿದ್ದರಿಂದ ಸಂಪೂರ್ಣ ಹತ್ತಿ ಸುಟ್ಟಿದೆ.

ಬರಗಾಲದ ಸಮಯದಲ್ಲಿ ಸಾಲ ಮಾಡಿ ಬೆಳೆದಿದ್ದ ಸುಮಾರು₹2 ಲಕ್ಷ ಮೌಲ್ಯದ ಹತ್ತಿ ಈಗ ಬೆಂಕಿಗೆ ಆಹುತಿಯಾಗಿದ್ದು, ಭಾರಿ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಚಂದ್ರಶೇಖರ ಮನವಿ ಮಾಡಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಗುರುವಾರ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ವಡಗೇರಾ ಪೊಲೀಸ್ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.