ADVERTISEMENT

ಸೈದಾಪುರ | ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ಜನಜೀವನ ಅಸ್ತವ್ಯಸ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 7:05 IST
Last Updated 14 ಸೆಪ್ಟೆಂಬರ್ 2025, 7:05 IST
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿರುವುದು.
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿರುವುದು.   

ಬಳಿಚಕ್ರ (ಸೈದಾಪುರ): ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರುದ್ದು, ಮನೆಯಂಗಳದಲ್ಲಿ ನೀರು ಸಂಗ್ರಹಗೊಂಡು ಕೆರೆಯಂತೆ ಪರಿವರ್ತೆನೆಯಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಬಳಿಚಕ್ರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಜನ ಜಾನುವಾರುಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮನೆಯಲ್ಲಿನ ದವಸ ಧಾನ್ಯಗಳು, ಮಕ್ಕಳ ಶಾಲಾ ಸಾಮಾಗ್ರಿಗಳು, ಅಗತ್ಯ ವಸ್ತುಗಳು ಹಾಗೂ ಜಾನುವಾರುಗಳಿಗೆ ಶೇಖರಣೆ ಮಾಡಿದ ಮೇವು ಸಂಪೂರ್ಣ ನೀರು ಪಾಲಾಗಿದೆ., ಅಲ್ಲಿನ ಜನರು ಸಂಬಂಧಿಕರ ಮನೆ,  ದೇವಸ್ಥಾನ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಾಲ ಕಳೆಯುವಂತಾಗಿದೆ.

ADVERTISEMENT

ಸಾಂಕ್ರಾಮಿಕ ರೋಗಗಳ ಭೀತಿ: 

ಮಳೆ ನಿಂತರು ಜನರಲ್ಲಿ ಸಾಂಕ್ರಾಮಿಕ ರೋಗಗಳು ಭೀತಿ ಕಾಡುತ್ತಿದೆ. ಮಳೆ ನೀರಿನಲ್ಲಿ ಹರಿದುಕೊಂಡು ಬಂದ ಕಸ ತಿಪ್ಪೆಗುಂಡಿಯಂತಾಗಿ ಮಾರ್ಪಟ್ಟಿದೆ. ನೀರು ನಿಂತಿರುವುದರಿಂದ ಸೊಳ್ಳೆಗಳ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಮಳೆಗಾಲದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಡಿಸಿದರು.

ಚರಂಡಿ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧ:

ಹಲವು ವರ್ಷಗಳ ಹಿಂದೆ ಮನೆಗಳಿಗೆ ಚರಂಡಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿತ್ತು. ಆದರೆ ಕೆಲವರು ನನ್ನ ಜಾಗದಲ್ಲಿ ಬೇಡ ಎಂದು ವಿರೋಧ ಮಾಡುವುದರಿಂದ ಮುಂದೂಡಲ್ಪಡುತ್ತಿದೆ.

ಮಳೆ ಬಂದಾಗ ಸಂಗ್ರಹಗೊಂಡ ನೀರು ಪಂಚಾಯಿತಿ ಸಿಬ್ಬಂದಿ ಮೋಟರ್ ಮೂಲಕ  ಹೊರ ಹಾಕುತ್ತಾರೆ. ಮಳೆ ಬಂದರೆ ಮತ್ತೆ ಯಥಾಸ್ಥಿತಿ ಎನ್ನುತ್ತಾರೆ ಸ್ಥಳಿಯರು.

ಮಾಚರಡ್ಡಿ ಬೋಯಿನ್, ಗುಂಜಲಪ್ಪ, ದೇವಿಂದ್ರ ಬೋಮ್ಮಣ್, ಹಣಮಂತ ಧೋತ್ರೆ, ಬಸವರಾಜ ಬೋಳಿ, ಸಿದ್ದಪ್ಪಗೌಡ, ಯಂಕಪ್ಪ ಬೇಳಿಗೇರಿ, ಭೀಮಣ್ಣ ಭಜಂತ್ರಿ, ನಿಂಗಪ್ಪ ಪೂಜಾರಿ, ವೆಂಕಟೇಶ್ ನಾಯಕ್, ತಾಯಪ್ಪ ಬಿಳ್ಹಾರ್, ಮಶಪ್ಪ ಸಂಜೀವಿನಿ, ಬಸವರಾಜ ನಾಯಕ್, ಮಶಪ್ಪ, ಸಾಬಣ್ಣ, ನರಸಪ್ಪ ಅನೇಕರಿದ್ದರು.

ಅಧಿಕಾರಿಗಳು 24 ಗಂಟೆ ಒಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ ಮುಖ್ಯ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ
ಉಮೇಶ್. ಕೆ ಮುದ್ನಾಳ ಸಾಮಾಜಿಕ ಹೋರಾಟಗಾರ
ಚರಂಡಿ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧದಿಂದ ಮನೆಗಳಿಗೆ ನೀರು ನುಗ್ಗುತ್ತಿವೆ. ಇದಕ್ಕೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು.
ಹನುಮಂತ ಬೋಯಿನ್ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.