ADVERTISEMENT

ಡೊಳ್ಳು ಕುಣಿತ ವಿಶಿಷ್ಟ ಜಾನಪದ ಕಲೆ

ಡೊಳ್ಳು ಕುಣಿತ ತರಬೇತಿ ಶಿಬಿರದಲ್ಲಿ ಯಲ್ಲಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 4:15 IST
Last Updated 8 ಡಿಸೆಂಬರ್ 2019, 4:15 IST
ಹುಣಸಗಿ ಸಮೀಪದ ದೇವತಕಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡೊಳ್ಳಿನ ತರಬೇತಿ ಶಿಬಿರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಚಾಲನೆ ನೀಡಿದರು
ಹುಣಸಗಿ ಸಮೀಪದ ದೇವತಕಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡೊಳ್ಳಿನ ತರಬೇತಿ ಶಿಬಿರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಚಾಲನೆ ನೀಡಿದರು   

ಹುಣಸಗಿ: ‘ಡೊಳ್ಳು ಕುಣಿತ ಜಾನಪದ ಕಲೆಗಳಲ್ಲಿಯೇ ವಿಶಿಷ್ಟವಾದದ್ದು’ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ ಅಭಿಪ್ರಾಯಪಟ್ಟರು.

ಹುಣಸಗಿ ಸಮೀಪದ ದೇವತಕಲ್ಲ ಗ್ರಾಮದ ಕುವೆಂಪು ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಡೊಳ್ಳು ಕುಣಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಕೃಷಿ ಚಟುವಟಿಕೆ ಜತೆಗೆ ಜಾನಪದ ಕ್ರೀಡೆ ಹಾಗೂ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದರು. ಅಲ್ಲದೆ, ಅವರು ನಿತ್ಯದ ಕೆಲಸದಲ್ಲಿ ಶ್ರಮವನ್ನು ಆರಿಸಿಕೊಳ್ಳಲು ಹಲವು ಕಲೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರು ಎಂದರು.

ADVERTISEMENT

ಇಂದಿನ ಯುವ ಜನಾಂಗ ನಮ್ಮ ಮೂಲ ಜನಪದ ಕಲೆಗಳನ್ನು ಕಲಿಯುವ ಮೂಲಕ ನಮ್ಮತನವನ್ನು ಎತ್ತಿ ಹಿಡಿಯಬೇಕು ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ,‘ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಯುವ ಜನಪದ ಕಲಾವಿದರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಈ ನಿಟ್ಟಿನಲ್ಲಿ ಯುವಕರಿಗೆ ತರಬೇತಿ ನೀಡುವುದರ ಮೂಲಕ ಯಾದಗಿರಿ ಜಿಲ್ಲೆಯಲ್ಲಿ 10 ಹೊಸ ತಂಡಗಳನ್ನು ರಚಿಸುವ ಉದ್ದೇಶವಿದೆ. ಆದ್ದರಿಂದ ದೇವತಲ್ಲ ಗ್ರಾಮದಲ್ಲಿ ಡೊಳ್ಳಿನ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಮುಂದಿನ ದಿನಗಳಲ್ಲಿ ಹಲಗೆ ತರಬೇತಿ, ಕಣಿ ಹಲಗೆ, ಸಂಬಾಳ, ಕಂಸಾಳೆ ಮತ್ತಿತರ ಜಾನಪದ ಗೀತ ಪ್ರಕಾರ ಹಾಗೂ ಸಂಪ್ರದಾಯ ಹಾಡುಗಳ ತರಬೇತಿ ನೀಡುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಹೇಡಿಗಿನಾಳ ಮಾತನಾಡಿದರು. ಉಪನ್ಯಾಸಕ ಬಿರೇಶ ಕುಮಾರ ದೇವತಕಲ್ಲ, ತರಬೇತುದಾರ ಬಸಪ್ಪ ಹನುಮಸಾಗರ ವೇದಿಕೆಯಲ್ಲಿದ್ದರು. ಲಂಕೇಶ ನಿರೂಪಿಸಿದರು. ಶ್ರೇಯಣ್ಣ ಸ್ವಾಗತಿಸಿದರು. ಸಂತೋಷ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.