ADVERTISEMENT

ಜಾನುವಾರುಗಳಿಗೆ ಕಾಲು ಬಾಯಿ ರೋಗ ಚಿಕಿತ್ಸೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಮೇ 2021, 16:30 IST
Last Updated 31 ಮೇ 2021, 16:30 IST
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಿದೆ
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಿದೆ   

ಮುಡಬೂಳ (ಶಹಾಪುರ): ಬೇಸಿಗೆ ಕಾಲ ಮುಗಿಯತ್ತಿದ್ದಂತೆ ಜಾನುವಾರುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ. ಪಶು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಮತ್ತು ಚಿಕಿತ್ಸೆಯು ಇಲ್ಲವಾಗಿದೆ. ಇದರಿಂದ ಜಾನುವಾರು ಸಾಕಿದ ರೈತರು ಅತಂಕಗೊಂಡಿದ್ದಾರೆ.

ಎತ್ತಿನ ಪಾದದಲ್ಲಿ (ಕುರ) ಪಟ್ಟಿ ಬಿಚ್ಚಿ ರಕ್ತ ಹಾಗೂ ಕಿವು ಸೋರಿಕೆಯಾಗುತ್ತಲಿದೆ. ಬಾಯಿ ರೋಗದಿಂದ ಮೇವು ತಿನ್ನುತ್ತಿಲ್ಲ. ಎತ್ತು ಹಾಗೂ ಹೋರಿಗೆ ಸರಿಯಾದ ಔಷಧಿ ಹಾಗೂ ಚಿಕಿತ್ಸೆ ಇಲ್ಲದೆ ತೊಂದರೆ ಅನುಭವಿಸುತ್ತಲಿವೆ. ಪಶು ಆಸ್ಪತ್ರೆ ಇದೆ ವೈದ್ಯರಿಲ್ಲ. ಅಲ್ಲದೆ ಈಗ ಮುಂಗಾರು ಆರಂಭವಾಗಿದೆ. ಬಿತ್ತನೆಯ ಕಾರ್ಯ ಶುರುವಾಗಲಿದೆ. ಎತ್ತಿನ ಮೇಲೆ ಎಲ್ಲವು ಅವಲಂಬಿತವಾಗಿದೆ. ತಕ್ಷಣ ಲಸಿಕೆ ನೀಡಬೇಕು ಎಂದು ಗ್ರಾಮದ ಮುಖಂಡ ಅಶೋಕರಾವ ಮಲ್ಲಾಬಾದಿ ಜಿಲ್ಲ ಪಶು ವೈದ್ಯಾಧಿಕಾರಿಗೆ ಮನವಿ ಮಾಡಿದ್ದಾರೆ.

ಕಾಲುಬಾಯಿ ರೋಗ ಬಂದ ಜಾನುವಾರುಗಳಿಗೆ ಔಷಧಿ ಹಾಗೂ ಲಸಿಕೆ ಹಾಕಲಾಗುತ್ತದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಜಾನುವಾರುಗಳಿಗೆ ಹಾಕಲು ಲಸಿಕೆ ಇಲ್ಲ. ಈಗಾಗಲೇ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ರೋಗ ಕಾಣಿಸಿದ ಜಾನುವಾರುಗಳಿಗೆ ಔಷಧಿ ನೀಡಲಾಗುತ್ತಿದೆ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.