ಸುರಪುರ: ‘ಸಂಘದ ತತ್ವ, ಸಿದ್ಧಾಂತದಲ್ಲಿ ನಡೆದುಕೊಂಡು ಹೋಗಬೇಕು. ಅನ್ಯಾಯ ವಿರುದ್ಧ ಹೋರಾಡಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಶ್ರೀನಿವಾಸನಾಯಕ ಬೊಮ್ಮನಳ್ಳಿ ಹೇಳಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ಹಣಮಂತ ಎಂ. ಹೊಸಮನಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜು ದೊಡ್ಡಮನಿ ಮಾತನಾಡಿದರು.
ಮಡಿವಾಳಪ್ಪ ಕಟ್ಟಿಮನಿ ನಿರೂಪಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರ ರೋಜಾ ವಂದಿಸಿದರು.
ಪದಾಧಿಕಾರಿಗಳು: ಮಾನಪ್ಪ ಬಳಬಟ್ಟಿ (ಸಂಚಾಲಕ), ರಾಯಪ್ಪ ಕರಡಕಲ್, ಮಡಿವಾಳಪ್ಪ, ಕಿರದಳ್ಳಿ, ವೈಜನಾಥ ಹೊಸಮನಿ, ದೇವಿಂದ್ರಪ್ಪ ನಾಯಕ ಬೊಮ್ಮನಳ್ಳಿ, ಗಿರೀಶ ಶಾಖನವರ, ತಿರುಪತಿ ದೊರಿ ದೊಡ್ಡಿ, ಲಂಕೆಪ್ಪ ದೊಡ್ಡಮನಿ, ಪರಶುರಾಮ ದೊಡ್ಡಮನಿ (ಸಂಘಟನಾ ಸಂಚಾಲಕರು), ಮಲ್ಲಪ್ಪ ಕಟ್ಟಿಮನಿ (ಖಜಾಂಚಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.