ADVERTISEMENT

ಮಾಜಿ ಸೈನಿಕ ಕ್ಯಾಪ್ಟನ್ ಟಿ.ಆನಂದಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:03 IST
Last Updated 15 ನವೆಂಬರ್ 2020, 2:03 IST
ಟಿ.ಆನಂದಪ್ಪ
ಟಿ.ಆನಂದಪ್ಪ   

ಯರಗೋಳ: ಇಲ್ಲಿಗೆ ಸಮೀಪದ ಯಡ್ಡಳ್ಳಿ ಗ್ರಾಮದಲ್ಲಿ ಮಾಜಿ ಸೈನಿಕ ಕ್ಯಾಪ್ಟನ್ ಟಿ.ಆನಂದಪ್ಪ ಶನಿವಾರ ನಿಧನರಾಗಿದ್ದಾರೆ.

1941 ಮಾರ್ಚ್ 16 ರಂದು ಜನಿಸಿದ ಆನಂದಪ್ಪ 1963ರಲ್ಲಿ ಹವಾಲ್ದಾರ್ ಆಗಿ ಭಾರತೀಯ ಸೇವೆಗೆ ಸೇರಿದ್ದರು. ಸುದೀರ್ಘ 28 ವರ್ಷ ಪಂಜಾಬ್, ಪಠಾಣ ಕೋಟ, ಮುಂತಾದ ಕಡೆ ಸೇವೆ ಸಲ್ಲಿಸಿದ್ದಾರೆ.

1971ರಲ್ಲಿ ನಡೆದ ಚೀನಾ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿ ವೀರತ್ವ ಮೆರೆದಿದ್ದಾರೆ. 15ನೇ ಅಗಸ್ಟ್ 1988ರಲ್ಲಿ ಅಂದಿನ ರಾಷ್ಟ್ರಪತಿ ಆರ್.ವೆಂಕಟರಮನ್ ಅವರಿಂದ ಕ್ಯಾಪ್ಟನ್‌ ಪದವಿ ಪ್ರಶಸ್ತಿ ಪಡೆದು ನಿವೃತ್ತಿ ಹೊಂದಿದ್ದರು.

ADVERTISEMENT

ಇವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ.

ಅಂತ್ಯಕ್ರಿಯೆ ಭಾನುವಾರ(ನ.15) ಸ್ವಗ್ರಾಮ ಯಡ್ಡಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.