ADVERTISEMENT

ಡ್ರೈಪುಟ್ಸ್ ಕಳವು; ಅಪರಾಧಿಗೆ 4 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:36 IST
Last Updated 1 ಆಗಸ್ಟ್ 2025, 6:36 IST
<div class="paragraphs"><p>ಪ್ರಾಧಿನಿಧಿಕ ಚಿತ್ರ</p></div>

ಪ್ರಾಧಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

ಶಹಾಪುರ: ನಗರದ ಮಾರ್ಟ್ ಅಂಗಡಿಯಲ್ಲಿ ಡ್ರೈಫ್ರುಟ್ಸ್‌ ಕಳವು ಆರೋಪ ಸಾಬೀತಾಗಿದ್ದರಿಂದ ಬುಧವಾರ ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಆದೇಶಿಸಿದ್ದಾರೆ.

ADVERTISEMENT

ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಇಟಗಿಹಾಳ ಗ್ರಾಮದ ಓಂಕಾರ ತುಕಾರಾಮ ಕಾಂಬ್ಳೆ ಶಿಕ್ಷೆಗೆ ಒಳಗಾದ ಅಪರಾಧಿ.

2024 ಅಕ್ಬೋಬರ್ 23ರಂದು ನಗರದ ರಾಕಂಗೇರಾ ಬಡಾವಣೆಯಲ್ಲಿರುವ ಮಾರ್ಟ್ ಅಂಗಡಿಯ ಮೇಲಿನ ಟಿನ್ ಶೆಡ್ ಕತ್ತರಿಸಿ, ರಾತ್ರಿ ವೇಳೆಯಲ್ಲಿ ₹ 4.50 ಲಕ್ಷ ಮೌಲ್ಯದ ಬೆಳೆಬಾಳುವ ಡ್ರೈ ಫ್ರುಟ್ಸ್, ಕಿರಾಣಿ ಸಾಮಾನು, ಗಲ್ಲಾದಲ್ಲಿದ್ದ ₹ 45 ಸಾವಿರ ನಗದು ಹಣ ದೋಚಿಕೊಂಡು ಪರಾರಿಯಾಗಿದ್ದ ಎಂದು ಅಂಗಡಿ ಮಾಲೀಕ ಮಹ್ಮದ್‌ ಇಲಿಯಾಸ್ ದಾದುಲ್ಲಾ ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇನ್‌ಸ್ಪೆಕ್ಟರ್‌ ಎಸ್.ಎನ್. ಪಾಟೀಲ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ದೂರುದಾರ ಪರವಾಗಿ ಎಪಿಪಿ ದಿವ್ಯಾರಾಣಿ ನಾಯಕ ಸುರಪುರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.