ಹುಣಸಗಿ: ತಾಲ್ಲೂಕಿನ ಹೆಬ್ಬಾಳ.ಬಿ ಗ್ರಾಮದಲ್ಲಿರುವ ಗಾಂಧೀಜಿ ದೇವಸ್ಥಾನ ಹಾಗೂ ಕಟ್ಟೆ ಅವಸಾನದಲ್ಲಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ನಮ್ಮ ಹಿರಿಯರು 1948ರಲ್ಲಿ ಗಾಂಧೀಜಿ ಕಟ್ಟೆ ಹಾಗೂ ದೇವಸ್ಥಾನ ನಿರ್ಮಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಮಳೆ ಗಾಳಿಗೆ ಈ ದೇವಸ್ಥಾನದ ಒಂದು ಭಾಗ ಬಿದ್ದುಹೋಗಿದೆ. ಆದರೆ ಇದುವರೆಗೂ ದುರಸ್ತಿಗೆ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿಯಾಗಲಿ ಮುಂದಾಗಿಲ್ಲ. ಗ್ರಾಮದಲ್ಲಿರುವ ದೇವಸ್ಥಾನಗಳ ನಿರ್ವಹಣೆಗೆ ಕೆಲ ಜಮೀನು ಕೂಡ ನೀಡಲಾಗಿತ್ತು ಆದರೆ ನಿರ್ವಹಣೆ ಮಾತ್ರ ಆಗುತ್ತಿಲ್ಲ ಎಂದು ಯಲ್ಲಯ್ಯ ಗುತ್ತೇದಾರ್ ದೂರಿದರು.
ಅಧಿಕಾರಿಗಳು ಗಮನಹರಿಸಿ ದುರಸ್ತಿಗೆ ಮುಂದಾಗುವಂತೆ ಶರಣಗೌಡ ಪಾಟೀಲ, ಮೌನೇಶ ಶಿರಗುಂಡ, ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.