ADVERTISEMENT

ಕಕ್ಕೇರಾ: ಗವಿರಂಗ ಕಾರ್ತಿಕೋತ್ಸವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 3:03 IST
Last Updated 3 ಜನವರಿ 2022, 3:03 IST
ಕಕ್ಕೇರಾ ಸಮೀಪದ ಗವಿರಂಗ ಹಣಮಂತ ದೇವರ ದೇವಸ್ಥಾನದಲ್ಲಿ ಶನಿವಾರ ಸರಳವಾಗಿ ಕಾರ್ತಿಕೋತ್ಸವ ಜರುಗಿತು
ಕಕ್ಕೇರಾ ಸಮೀಪದ ಗವಿರಂಗ ಹಣಮಂತ ದೇವರ ದೇವಸ್ಥಾನದಲ್ಲಿ ಶನಿವಾರ ಸರಳವಾಗಿ ಕಾರ್ತಿಕೋತ್ಸವ ಜರುಗಿತು   

ಕಕ್ಕೇರಾ: ಇಲ್ಲಿಗೆ ಸಮೀಪದ ಗವಿರಂಗ ಹಣಮಂತ ದೇವರ ದೇವಸ್ಥಾನದಲ್ಲಿ ಭಾನುವಾರ ಕಾರ್ತೀಕೊತ್ಸವ ಜರುಗಿತು.

ಮುಖಂಡ ವೀರಸಂಗಪ್ಪ ಕೊಡೇಕಲ್ ಮಾತನಾಡಿದರು. ಶನಿವಾರ ರಾತ್ರಿಯೇ ಹಣಮಂತ ದೇವರ ದೇವಸ್ಥಾನದಿಂದ ಏದಲಬಾವಿ ಹತ್ತಿರದ ಹೊಳೆ ಜಟ್ಟೆಪ್ಪ ಗುಡಿ ಹತ್ತಿರದ ದೇವರ ಗಂಗಸ್ಥಳ ನಡೆದು ಬೆಳಗಿನ ಜಾವ ಗುಡಿ ಗವಿರಂಗ ಪ್ರವೇಶಗೊಂಡಿತು. ಬೆಳಿಗ್ಗೆ ಭಕ್ತರು ದೀಡ್ ನಮಸ್ಕಾರ, ಕೊಡೆ, ನೈವೇದ್ಯ, ಕಾಯಿ-ಕಪರ್ೂರ ಅರ್ಪಣೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳು ನಡೆದವು.

ಪೂರ್ವಜರ ಕಾಲದಿಂದಲೂ ನಡೆದು ಬಂದ ಪದ್ಧತಿಯಂತೆ ಐದು ಜನ ಭಕ್ತರು ಬಂಡೆಕಲ್ಲಿನ ಮೇಲೆ ಹೊಳಿಗೆ ಊಟದ ನಂತರ ಮಹಾಪ್ರಸಾದ ಪ್ರಾರಂಭಗೊಂಡಿತು. ಜಾನಪದ ಕಲಾವಿದರಾದ ಮರೆಮ್ಮ ಪೂಜಾರಿ, ಜೆಟ್ಟೆಪ್ಪ ಯಲಗಟ್ಟಿ ತಂಡದವರಿಂದ ಜನಪದ ಹಾಡುಗಳು ನೆರೆದಿದ್ದ ಭಕ್ತರ ಮನಸೂರೆಗೊಂಡವು.

ADVERTISEMENT

ಹಿರಿಯರಾದ ಭೀಮಣ್ಣ ಪೂಜಾರಿ, ರೇವಣಸಿದ್ದಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಹಣಮಂತ್ರಾಯ ಪೂಜಾರಿ, ಅಂಬ್ರಪ್ಪ ಮುಂಡರಗಿ, ಸಾಮಣ್ಣ ಜುಮ್ಮಾರ ವರ್ಷದ ಮೊದಲ ದೇವರ ಹೇಳಿಕೆ ನಡೆದಾಗ, ನೆರೆದಿದ್ದ ಭಕ್ತವೃಂದ ಶಾಂತಚಿತ್ತದಿಂದ ಆಲಿಸಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಮುಖಂಡರಾದ ಹಣಮಂತ್ರಾಯಗೌಡ, ವೀರಸಂಗಪ್ಪ ಸಾಹುಕಾರ, ಸಿದ್ದಣ್ಣನಾಯಕ ದೇಸಾಯಿ, ನಿಂಗಪ್ಪನಾಯ್ಕ್, ಜೆಟ್ಟೆಪ್ಪ ಗದಗ್, ಜೆಟ್ಟೆಪ್ಪ ಯಲಗಟ್ಟಿ, ಮರೆಮ್ಮ ಪೂಜಾರಿ, ಗವಿಸಿದ್ದೇಶ, ಎಚ್, ಸಂಗಣ್ಣ ಏದಲಭಾವಿ, ಕರೀಮಸಾಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.