ADVERTISEMENT

ಶಿಶುಗಳಿಗೆ ಪಿಸಿವಿ ಲಸಿಕೆ ಹಾಕಿಸಿ: ಡಾ.ವಸುಧಾ ಕುಲಕರ್ಣಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:42 IST
Last Updated 28 ನವೆಂಬರ್ 2021, 14:42 IST
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪಿಸಿವಿ ಲಸಿಕೆ ವಿತರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ವಸುಧಾ ಕುಲಕರ್ಣಿ ಉದ್ಘಾಟಿಸಿದರು. ಮಲ್ಲೇಶ ಕುರಕುಂದಿ, ಸಂಗಣ್ಣ ನುಚ್ಚಿನ್ ಇದ್ದರು
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪಿಸಿವಿ ಲಸಿಕೆ ವಿತರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ವಸುಧಾ ಕುಲಕರ್ಣಿ ಉದ್ಘಾಟಿಸಿದರು. ಮಲ್ಲೇಶ ಕುರಕುಂದಿ, ಸಂಗಣ್ಣ ನುಚ್ಚಿನ್ ಇದ್ದರು   

ಯಾದಗಿರಿ: ಮಕ್ಕಳಲ್ಲಿ ನ್ಯೂಮೋಕಾಲ್ಸ್ ಬ್ಯಾಕ್ಟಿರಿಯಾದಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯ ನ್ಯೂಮೋಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕೆ ಒಳಗೊಂಡಿದ್ದು, ಲಸಿಕೆ ಹಾಕಿಸಿ ಎಂದು ಆಡಳಿತ ವೈದ್ಯಾಧಿಕಾರಿ ಡಾ.ವಸುಧಾ ಕುಲಕರ್ಣಿ ಸಲಹೆ ನೀಡಿದರು.

ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ನ್ಯೂಮೋಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಯ ಬೆಲೆ ಒಂದು ಡೋಸ್‌ಗೆ ಮೂರು ಸಾವಿರವಿದೆ. ಮೂರು ಡೋಸ್ ಪಡೆಯಲು ₹10 ಸಾವಿರ ಖರ್ಚು ಮಾಡಬೇಕಿತ್ತು. ಇದು ಗ್ರಾಮೀಣ ಭಾಗದ ಜನತೆಗೆ ಹೊರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರವೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಮುಂದಾಗಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.

ADVERTISEMENT

ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲೇಶ ಕುರಕುಂದಿ ಮಾತನಾಡಿ, ಲಸಿಕೆಯನ್ನು ಮಗುವಿಗೆ ಒಂದೂವರೆ ತಿಂಗಳಿಗೆ, ಮೂರೂವರೆ ತಿಂಗಳಿಗೆ ಹಾಗೂ 9ನೇ ತಿಂಗಳಿಗೆ ನೀಡಲಾಗುತ್ತದೆ. ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಬಹುದು. ಸಾರ್ವಜನಿಕರು ತಪ್ಪದೇ ತಮ್ಮ ನವಜಾತ ಶಿಶುಗಳಿಗೆ ಪಿಸಿವಿ ಹಾಕಿಸಬೇಕು ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಣ್ಣ ನುಚ್ಚಿನ್, ಇಂದಿರಾ ಗೋಗಿ, ಷಣ್ಮುಖ ಹೊಸಳ್ಳಿ, ಮುರಗೇಂದ್ರ, ಲಕ್ಷ್ಮೀ, ಮಂಗಳಾ, ಮಾಯಾದೇವಿ, ರೇಖಾ, ದೇವಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.