ADVERTISEMENT

ಧರ್ಮ ಮಾರ್ಗ ಅನುಸರಿಸಲು ಜಾಲಹಳ್ಳಿ ಜಯಶಾಂತಲಿಂಗೇಶ್ವರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:29 IST
Last Updated 19 ಡಿಸೆಂಬರ್ 2019, 10:29 IST
ಹುಣಸಗಿಯಲ್ಲಿ ಸಾಮೂಹಿಕ ಅಯ್ಯಾಚಾರ ಮತ್ತು ಧರ್ಮಸಭೆಯನ್ನು ಮಠಾಧೀಶರು ಉದ್ಘಾಟಿಸಿರು
ಹುಣಸಗಿಯಲ್ಲಿ ಸಾಮೂಹಿಕ ಅಯ್ಯಾಚಾರ ಮತ್ತು ಧರ್ಮಸಭೆಯನ್ನು ಮಠಾಧೀಶರು ಉದ್ಘಾಟಿಸಿರು   

ಹುಣಸಗಿ: ಪ್ರತಿಯೊಬ್ಬರೂ ಧರ್ಮ ಮಾರ್ಗವನ್ನು ಅನುಸರಿಸಿ ನಡೆದರೇ ಧರ್ಮ ಅವರನ್ನು ಕಾಪಾಡುತ್ತದೆ ಎಂದು ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರಲವಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಅಯ್ಯಾಚಾರ ಮತ್ತು ತುಲಾಭಾರ ಮತ್ತು ಧರ್ಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಿಂದ ದೂರ ಉಳಿಯುತ್ತಿದ್ದಾರೆ ಎಂದರು.ನೆಮ್ಮದಿಯ ಜೀವನಕ್ಕಾಗಿ ಭಗವಂತ, ಗುರು ಸ್ಮರಣೆ ಅಗತ್ಯ ಎಂದರು.

ADVERTISEMENT

ದೇವಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವರು, ತಿವಿಧ ದಾಸೋಹಿಗಳು ಎಂದು ಹೆಸರಾದ ಜಾಲಹಳ್ಳಿಯ ಜಯ ಶಾಂತಲಿಂಗೇಶ್ವರ ಸ್ವಾಮಿಗಳು ಸಾಮಾಜಿಕ ಕಳಕಳಿ ಹೊಂದಿದ್ದು, ಮಕ್ಕಳಿಗೆ ಶಿಕ್ಷಣ, ವಸತಿ, ಧಾರ್ಮಿಕ ಪ್ರಜ್ಞೆ ನೀಡುವ ಮೂಲಕ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾಹಿತ್ಯ, ಸಂಗೀತ, ಕೃಷಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸಲಾಯಿತು.

ಡಾ.ವಿಶ್ವರಾಧ್ಯ ಸ್ವಾಮೀಜಿ ಮಾಗಣಗೇರಿ, ವೀರಘಟ್ಟದ ಅಡವಿಲಿಂಗ ಮಹಾರಾಜರು, ಕೆಂಭಾವಿ ಚನ್ನವೀರ ಶಿವಾಚಾರ್ಯರು, ಸೂಗೂರು, ರುಕ್ಮಾಪುರ, ಮಲ್ಲಿಕಾರ್ಜುನ ಸ್ವಾಮಿ ಸ್ಥಾವರಮಠ, ಯುವ ಮುಖಂಡ ಹನುಮಂತ ನಾಯಕ, ಡಾ.ಬಸನಗೌಡ ಅಳ್ಳಿಕೋಟಿ, ಎಚ್.ಸಿ.ಪಾಟೀಲ, ಸಂಗನ ಗೌಡ ಪಾಟೀಲ ವಜ್ಜಲ, ಸುರೇಶ ಸಜ್ಜನ, ಬಸವರಾಜ ಮಲಗಲದಿನ್ನಿ, ಸಿದ್ದಣ್ಣ ಅಂಕಲಕೋಟಿ, ಹೊನ್ನಪ್ಪ ದೇಸಾಯಿ, ಬಿ.ಎಲ್. ಹಿರೇಮಠ, ತಿಪ್ಪಣ್ಣ ಚಂದಾ, ಅಮರಯ್ಯಸ್ವಾಮಿ ಜಾಲಿಬೆಂಚಿ, ಡಾ.ಎಸ್.ಬಿ.ಪಾಟೀಲ ಇದ್ದರು.

ಮಂಗಳವಾರ ಸಂಜೆ ಜಯಶಾಂತಲಿಂಗೇಶ್ವರ ಸ್ವಾಮೀಜಿಗಳನ್ನು ಅಲಂಕೃತ ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಸಂಸದ ರಾಜಾ ಅಮರೇಶ ನಾಯಕ ಚಾಲನೆ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.