ADVERTISEMENT

ಯಾದಗಿರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 5:59 IST
Last Updated 27 ಜೂನ್ 2021, 5:59 IST
   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ.

ಮಳೆಯಿಂದ ಕೆಲ ಅಂಗಡಿ ಮುಂಗಟ್ಟುಗಳನ್ನು ತೆಗೆದಿಲ್ಲ. ರಸ್ತೆ ಮೇಲೆ ನೀರು ಹರಿಯುತ್ತಿದೆ. ಬಸ್ ಗಳ ಓಡಾಟವಿದ್ದರೂ ಪ್ರಯಾಣಿಕರು ಇಲ್ಲದಂತಾಗಿದೆ. ಭಾನುವಾರವಾಗಿದ್ದರಿಂದ ಜನ ಸಂಚಾರ ವಿರಳವಾಗಿದೆ.

ಮಳೆ ಇಲ್ಲದಿದ್ದರಿಂದ ರೈತರು ಆಕಾಶದತ್ತ ಮುಖ ಮಾಡಿದ್ದರು. ಮಳೆಗಾಗಿ ಕೆಂಭಾವಿ ವಲಯದಲ್ಲಿ ದೇವಸ್ಥಾನ, ಮಸೀದಿಯಲ್ಲಿ ಪೂಜೆ, ಪ್ರಾರ್ಥನೆ ಮಾಡಲಾಗಿತ್ತು.
ಮಳೆಯಿಂದ ರೈತರ ಆತಂಕ ದೂರವಾಗಿದೆ.

ADVERTISEMENT

ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಅಜೀಜ್ ಕಾಲೊನಿಯ ಮಹಾತ್ಮ ಗಾಂಧಿ ಶಾಲೆ ಸಮೀಪ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿವೆ.

ಶಶಿಧರ ಕಾಲೊನಿ, ಮಾತಾಮಾಣಿಕೇಶ್ಚರಿ ನಗರ ಸೇರಿದಂತೆ ವಿವಿಧ ಕಡೆ ಮಳೆ ನೀರು ನುಗ್ಗಿದೆ.

ಯರಗೋಳ ವರದಿ:ಯರಗೋಳ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ.

ಅಲ್ಲಿಪುರ, ಮುದ್ನಾಳ, ಅಬ್ಬೆ ತುಮಕೂರು, ಠಾಣಗುಂದಿ, ಬೊಮ್ಮಚಟ್ನಳ್ಳಿ, ಮಲಕಪ್ಪನಳ್ಳಿ, ವಡ್ನಳ್ಳಿ, ಎಸ್. ಹೊಸಳ್ಳಿ, ಮೋಟ್ನಳ್ಳಿ, ಕೋಟಗೇರಾ, ಚಿಂತಕುಂಟ, ಹೆಡಗಿಮದ್ರ, ಹೊನಗೇರಾ, ಹತ್ತಿ ಕುಣಿ, ಸಮಣಪುರ, ಬಂದಳ್ಳಿ, ಯಡ್ಡಳ್ಳಿ, ಚಾಮನಳ್ಳಿ, ಬೆಳಗೇರಾ, ಖಾನಳ್ಳಿ, ಅರಿಕೇರಾ ಬಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಂಚ, ಅಚ್ಚೋಲ, ಗುಲಗುಂದಿ, ಕಂಚಗಾರಹಳ್ಳಿ, ಬಾಚವಾರ, ಕಟ್ಟಿಗೆ ಶಾಹಾಪುರ ಗ್ರಾಮಗಳಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ.

ಹಳ್ಳಗಳಲ್ಲಿ ನೀರು ಹರಿಯತ್ತಿದೆ.ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು, ಹತ್ತಿ, ಭತ್ತ, ಹೆಸರು ಬೆಳೆಗಳಿಗೆ ಮಳೆಯಿಂದಾಗಿ ಆಸರೆಯಾಗಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ.

ನಾರಾಯಣಪುರ ಜಲಾಶಯದ ಮಟ್ಟ (ಜೂನ್–27)

ಜಲಾಶಯ → ಗರಿಷ್ಠ ಮಟ್ಟ→ ಭಾನುವಾರದ ಮಟ್ಟ→ ಒಳಹರಿವು (ಕ್ಯುಸೆಕ್‌ಗಳಲ್ಲಿ)→ ಹೊರಹರಿವು

ನಾರಾಯಣಪುರ → 492.25 ಮೀ → 489.13 ಮೀ → 25,000 → 31,720

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.