ADVERTISEMENT

ಗುರುಮಠಕಲ್‌: ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:38 IST
Last Updated 7 ನವೆಂಬರ್ 2025, 7:38 IST
<div class="paragraphs"><p>ಚಿರತೆ </p></div>

ಚಿರತೆ

   

ಗುರುಮಠಕಲ್‌: ಹತ್ತಿರದ ಚಪೆಟ್ಲಾ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಚಿರತೆ ಕಾಣಿಸಿಕೊಂಡ ಹಿನ್ನಲೆ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ.

ಗ್ರಾಮದ ಭೀಮಶಪ್ಪ ಅದಗಲ್‌ ಅವರು ಗುರುವಾರ ತಮ್ಮ ಎತ್ತುಗಳನ್ನು ಮೇಯಿಸುವ ವೇಳೆ, ಏಕಾಎಕಿ ಎತ್ತುಗಳು ಓಡಿವೆ. ದೂರದಲ್ಲಿದ್ದ ಭೀಮಶಪ್ಪ ಅವರು ಎತ್ತುಗಳತ್ತ ನೋಡಿದಾಗ ಚಿರತೆ ಕಂಡಿದೆ. 

ADVERTISEMENT

ಗುರುವಾರ ಸಂಜೆ ವೇಳೆ ಅರಣ್ಯ ಸಿಬ್ಬಂದಿ ಸ್ಥಳವನ್ನು ಪರಿಶೀಲಿಸಿದ್ದು, ‘ಕತ್ತಲಾದ ಕಾರಣ ಹೆಜ್ಜೆ ಗುರುತು ಕಂಡು ಬಂದಿಲ್ಲ. ಶುಕ್ರವಾರ ಮತ್ತೆ ಪರಿಶೀಲನೆ ನಡೆಸಲಾಗುವುದು’ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.