ADVERTISEMENT

ಹಾಲಗೇರಾ ಮೊಹರಂ ಗಲಾಟೆ: ಪ್ರತಿ ದೂರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:04 IST
Last Updated 20 ಜುಲೈ 2024, 14:04 IST
<div class="paragraphs"><p>ಮೊಹರಂ ಹಬ್ಬ (ಸಂಗ್ರಹ ಚಿತ್ರ)</p></div>

ಮೊಹರಂ ಹಬ್ಬ (ಸಂಗ್ರಹ ಚಿತ್ರ)

   

ವಡಗೇರಾ: ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ಮೊಹರಂ ಫೀರ್‌ ದಫನ್ ಸಮಯದಲ್ಲಿ ಉಂಟಾಗಿದ್ದ ಗಲಾಟೆ ಸಂಬಂಧ ಕಬ್ಬಲಿಗ ಸಮುದಾಯದವರು ಪ್ರತಿ ದೂರು ನೀಡಿದ್ದಾರೆ.

ಮೊಹರಂ ಆಚರಣೆ ವೇಳೆ ಹಲಗೆ ಬಾರಿಸಲು ಹೋಗದಿದ್ದಕ್ಕೆ ಮಾದಿಗ ಸಮುದಾಯದವರ ಮೇಲೆ ಕಬ್ಬಲಿಗ ಸಮುದಾಯದವರು ಹಲ್ಲೆ ನಡೆಸಿದ್ದಾರೆ ಎಂದು ದೂರಿ ರಾಮಚಂದ್ರ ಪರಪ್ಪ ಕರಡಿ ಅವರು ವಡಗೇರಾ ಪೊಲೀಸ್ ಠಾಣೆಯಲ್ಲಿ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ADVERTISEMENT

ಗ್ರಾಮದ ದಲಿತ ಸಮುದಾಯದ ವಿಲ್ಸನ್ ರಾಜಪ್ಪ ಮುಂಡರಗಿ ಹಾಗೂ 19 ಜನರು ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕಬ್ಬಲಿಗ ಸಮಾಜದ ಗೋವಿಂದಪ್ಪ ಸಾಬಣ್ಣ ಕಲ್ಮನಿ ಅವರು ಶುಕ್ರವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.