ಮೋಟ್ನಳ್ಳಿ (ಯರಗೋಳ): ‘ಬದಲಾದ ಜೀವನ ಕ್ರಮದಲ್ಲಿ ಆರೋಗ್ಯಕ್ಕೆ ಮಹತ್ವ ನೀಡಬೇಕಾದ ಅಗತ್ಯವಿದೆ’ ಎಂದು ಡಾ.ರಶ್ಮಿ.ಸಿ ಅಭಿಪ್ರಾಯಪಟ್ಟರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯುಷ್ ಇಲಾಖೆ ಮತ್ತು ಸ್ಪರ್ಶ ಚಾರಿಟಬಲ್ ಟ್ರಸ್ಟ್, ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿ,‘ಉತ್ತಮ ದಿನಚರಿಯೊಂದಿಗೆ ಶ್ರಮವಹಿಸಿ ಕೆಲಸ ಮಾಡಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ’ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರಕುಮಾರ ಹಾಗೂ ನಾಗರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ.ಲಿಖಿತ, ಡಾ.ರಾಜು, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಾಬಣ್ಣ, ವೆಂಕಟ್ರಮಣ ಗಟ್ಲ, ಸೀಮೆನ್, ರೆಡ್ಡಿ, ರಾಜೂಕುಮಾರ್, ಶರಣಪ್ಪ ಬೈರಂಕೊಂಡ, ಯೂನಸ್ ಧರೇಮಿ, ಶರಣುಗೌಡ, ಬಸವರಾಜಪ್ಪ ಅರ, ವಸಂತ, ಚನ್ನಬಸಪ್ಪ, ಶೋಭಾ, ಉಮಾ, ಅಕ್ಷತಾ, ಅಖಿಲೇಶ, ಶಿವಕುಮಾರ, ಮಹೇಶ್ವರಿ, ಮೊನೆಷ್ ಪಂಚಾಲ್, ಬನಶಂಕರ, ಶಿವ ಶಂಕರ, ಶರಣುಕುಮಾರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಶಿಬಿರದಲ್ಲಿ ಸುಮಾರು 85 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.