ADVERTISEMENT

‌ಹೆದ್ದಾರಿ ದರೋಡೆಕೊರರ ಬಂಧನ

ಲಾರಿ ಚಾಲಕ, ಕ್ಲೀನರ್‌ಗೆ ಬೆದರಿಸಿ ₹47 ಸಾವಿರ ದರೋಡೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:06 IST
Last Updated 14 ಫೆಬ್ರುವರಿ 2020, 9:06 IST
ಹೆದ್ದಾರಿ ದರೋಡಕೋರರನ್ನು ವಡಗೇರಾ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ಹೆದ್ದಾರಿ ದರೋಡಕೋರರನ್ನು ವಡಗೇರಾ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ   

ಯಾದಗಿರಿ: ಬಾಗಲಕೋಟೆ ಮೂಲದ ಸಿಮೆಂಟ್ ತುಂಬಿದ್ದ ಲಾರಿಯನ್ನು ಅಡ್ಡಗಟ್ಟಿ ತಡೆದು ಚಾಲಕ ಮತ್ತು ಕ್ಲೀನರ್‌ಗೆ ಹೊಡೆದು ಬೆದರಿಸಿ ಅವರಲ್ಲಿದ್ದ ₹47,200 ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಯಾದಗಿರಿಯ ಬಸವರಾಜ ಸಿಂಧೆ, ಸಂತೋಷ ತಳವಾರ್ ಚಟ್ನಳ್ಳಿ ಬಂಧಿತ ಆರೋಪಿಗಳು.

ಘಟನೆ ವಿವರ:ಸಿಮೆಂಟ್ ಲೋಡ್ ತೆಗೆದುಕೊಂಡು ಸೇಡಂನಿಂದ ಸಿಂಧನೂರಕ್ಕೆ ರಸ್ತೆಯ ಮೂಲಕ ಫೆ. 11ರಂದು ವಡಗೇರಾ ತಾಲ್ಲೂಕಿನ ಮನಗನಾಳ ಹತ್ತಿರದ ಕಾಟನ್ ಮಿಲ್‌ ಸಮೀಪ ತೆರಳುವ ವೇಳೆ ಆರೋಪಿಗಳು ಲಾರಿ ಅಡ್ಡಗಟ್ಟಿ ಹಿಂದೆ ಅಪಘಾತ ಮಾಡಿ ನಿಲ್ಲಿಸದೆ ಬಂದಿದ್ದೀರಾ ಎಂದು ಬೆದರಿಸಿ ಅವರಲ್ಲಿದ್ದ ಹಣವನ್ನು ಕಿತ್ತುಕೊಂಡಿದ್ದರು.

ADVERTISEMENT

ಈ ಕುರಿತು ಲಾರಿ ಚಾಲಕ, ಕ್ಲೀನರ್ ದೂರಿನ ಮೇರಿಗೆ ಕಾರ್ಯಪ್ರವೃತ್ತರಾದ ‍ಪೊಲೀಸರು ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಪರಿಚಿತ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಬುಧವಾರ ರಾತ್ರಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು ಕೆಎ–52 ಎಂ –1981 ಮಾರುತಿ ಸುಜಕಿ ಎರ್ಟಿಗಾ ಕಾರು ಸಹಿತ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಎಸ್‌ಪಿ ಋಷಿಕೇಶ ಭಗವಾನ್‌ ಸೋನವಣೆ ನಿರ್ದೇಶನದಂತೆ ಡಿವೈಎಸ್‌ಪಿ ಯು.ಶರಣಪ್ಪ ಮಾರ್ಗದಶರ್ನದಂತೆ ಸಿಪಿಐ ಶರಣಗೌಡ ಎನ್.ಎಂ., ವಡಗೇರಾ ಪಿಎಸ್‌ಐ ಸಿದರಾಯ ಬಳೂರ್ಗಿ ಹಾಗೂ ಸಿಬ್ಬಂದಿ ತಂಡ ರಚಿಸಲಾಗಿತ್ತು.
ಪ್ರಕರಣ ಭೇದಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.