ADVERTISEMENT

ವಲಸಿಗರ ಮನೆ ಮನೆ ಸಮೀಕ್ಷೆ

ಜಿಲ್ಲೆಯಲ್ಲಿ ಮನರೆಗಾ ಯೋಜನೆಯಡಿ ಕೆಲಸ ನೀಡಲು ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 16:25 IST
Last Updated 20 ಜೂನ್ 2020, 16:25 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಭೇಟಿ ನೀಡಿ ಮನೆಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದರು
ಯಾದಗಿರಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಭೇಟಿ ನೀಡಿ ಮನೆಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದರು   

ಯಾದಗಿರಿ: ಜಿಲ್ಲೆಗೆ ಮಹಾನಗರಗಳಿಂದ ಹಿಂದಿರುಗಿ ಬಂದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ವಲಸಿಗರ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ‘ವಲಸಿಗರ ಸಮೀಕ್ಷೆ ಕಾರ್ಯ’ ಶನಿವಾರ ಆರಂಭವಾಗಿದೆ.

ಮೊದಲ ಹಂತವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಲಸಿಗರು ಹಿಂದಿರು ಗಿರುವ ಯಾದಗಿರಿ ತಾಲ್ಲೂಕಿನ ಕೌಳೂರು, ಶಹಾಪುರ ತಾಲ್ಲೂಕಿನ ದೋರನಹಳ್ಳಿ ಮತ್ತು ಸುರಪುರ ತಾಲ್ಲೂಕಿನ ಬರದೇವನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗಿದೆ.

ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳು, ಕರವಸೂ ಲಿಗಾರರು, ಕಂಪ್ಯೂಟರ್ ಆಪರೇಟರ್‌ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿದ್ದಾರೆ.

ADVERTISEMENT

ಯಾದಗಿರಿ ತಾಲ್ಲೂಕಿನ ಕೌಳೂರು ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾ ಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಭೇಟಿ ನೀಡಿ ಮನೆಮನೆ ಸಮೀಕ್ಷೆ ಮಾಡುವ ಸಿಬ್ಬಂದಿಗೆ ತರಬೇತಿ ನೀಡಿದರು. ನಂತರ ಬೆಂಗಳೂರಿನಿಂದ ಹಿಂದಿರುಗಿದ ಐದು ಕುಟುಂಬಗಳ ಸಮೀಕ್ಷೆ ಕಾರ್ಯ ಮೇಲ್ವಿಚಾರಣೆ ಮಾಡಿದರು.

ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಪಂಗೆ ತೆರಳಿ ಮುಂಬೈನಿಂದ ಹಿಂದಿರುಗಿದ ವಲಸಿಗರ ಮನೆಗಳ ಸಮೀಕ್ಷೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.