ADVERTISEMENT

‘ನಾಡು, ನುಡಿಯನ್ನು ಗೌರವಿಸಿ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 15:28 IST
Last Updated 6 ನವೆಂಬರ್ 2019, 15:28 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ‘ಕಲ್ಯಾಣ ಕೊಡೇಕಲ್ಲ ವೈಭವ’ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು 
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ‘ಕಲ್ಯಾಣ ಕೊಡೇಕಲ್ಲ ವೈಭವ’ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು    

ಹುಣಸಗಿ: ‘ಕರ್ನಾಟಕದಲ್ಲಿ ಹುಟ್ಟಿರುವ ನಾವೆಲ್ಲ ನಾಡು ನುಡಿಯ ಕುರಿತು ಪ್ರೀತಿ ಗೌರವ ಹೊಂದಿರಬೇಕು. ಅವುಗಳಿಗೆ ಧಕ್ಕೆ ಬಂದಾಗ ಪ್ರತಿಯೊಬ್ಬ ಕನ್ನಡಿಗನೂ ಹೋರಾಟಕ್ಕಿಳಿಯಬೇಕು’ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ದುರದುಂಡೇಶ್ವರ ವಿರಕ್ತ ಮಠದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ 7ನೇ ವರ್ಷದ ‘ಕಲ್ಯಾಣ ಕೊಡೇಕಲ್ಲ ವೈಭವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿದರು. ಕರವೇ ವಲಯಾಧ್ಯಕ್ಷ ರಮೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಕಸಾಪ ಅಧ್ಯಕ್ಷ ಬಸಣ್ಣ ಗೋಡ್ರಿ, ಪಿಎಸ್ಐ ಸಿದ್ದು ಹೂಗಾರ ಸೇರಿ ಐವರಿಗೆ ‘ಕರುನಾಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ADVERTISEMENT

ಕೊಡೇಕಲ್ಲ ಬಸವಪೀಠದ ವೃಷಬೇಂದ್ರ ಅಪ್ಪ ಸಾನ್ನಿಧ್ಯ ವಹಿಸಿದ್ದರು. ದುರದುಂಡೇಶ್ವರ ವಿರಕ್ ತಮಠದ ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ರಾಜಾ ಜೀತೇಂದ್ರ ನಾಯಕ ಜಹಾಗಿರದಾರ, ಜಿ.ಪಂ ಸದಸ್ಯ ಎನ್.ಡಿ ನಾಯಕ, ತಾ.ಪಂ ಸದಸ್ಯ ಮೋಹನ ಪಾಟೀಲ್, ಗ್ರಾ.ಪಂ ಅಧ್ಯಕ್ಷೆ ಅಯ್ಯಮ್ಮ ಹೊಳೆಪ್ಪ ಮ್ಯಾಗೇರಿ, ರೈತ ಸಂಘದ ಮಹಾದೇವಿ ಬೇವಿನಾಳಮಠ, ಬೊಮ್ಮಣ್ಣ ಪತ್ತಾರ, ಶಾಮಸುಂದರ ಜ್ಯೋಷಿ, ಚಂದ್ರಶೇಖರ ಹೊಕ್ರಾಣಿ, ಅಯ್ಯಪ್ಪ ಪಡಶೆಟ್ಟಿ, ಸಿ.ಎಸ್ ಹಾವೇರಿ, ಸುರೇಶ ದೇವೂರು, ಸಂಗನಗೌಡ ಚಿಮ್ಮಲಗಿ, ಶಿವರಾಜ ಹೊಕ್ರಾಣಿ, ದೇವರಾಜ ಮಾಲಿಪಾಟೀಲ, ಅಮರೇಶ ನೂಲಿ ವೇದಿಕೆ ಮೇಲಿದ್ದರು.

ಗುರುರಾಜ ಜೋಶಿ ಸ್ವಾಗತಿಸಿದರು. ಕೆ.ಬಿ.ಗಡ್ಡದ್ ನಿರೂಪಿಸಿದರು. ಎಸ್.ಎಸ್ ಮಾರನಾಳ ವಂದಿಸಿದರು. ಬಳಿಕ ಹಾಸ್ಯ ಕಲಾವಿದ ಸಂಜು ಬಸಯ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.