ADVERTISEMENT

ಶಹಾಪುರ ವಕೀಲರ ಸಂಘದ ಚುನಾವಣೆ: ಯೂಸೂಫ್ ಸಿದ್ದಿಕಿ ಪ್ಯಾನಲ್‌ಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:19 IST
Last Updated 20 ಜುಲೈ 2025, 7:19 IST
ಶಹಾಪುರ ವಕೀಲರ ಸಂಘದ ಆಡಳಿತ ಮಂಡಳಿಗೆ ಶನಿವಾರ ನಡೆದ ಮತದಾನದಲ್ಲಿ ಯೂಸೂಫ್ ಸಿದ್ದಕಿ ಪ್ಯಾನಲ್ ಗೆಲುವು ಸಾಧಿಸಿತು
ಶಹಾಪುರ ವಕೀಲರ ಸಂಘದ ಆಡಳಿತ ಮಂಡಳಿಗೆ ಶನಿವಾರ ನಡೆದ ಮತದಾನದಲ್ಲಿ ಯೂಸೂಫ್ ಸಿದ್ದಕಿ ಪ್ಯಾನಲ್ ಗೆಲುವು ಸಾಧಿಸಿತು   

ಶಹಾಪುರ: 2025-26ನೇ ಸಾಲಿನ ವಕೀಲರ ಸಂಘದ ಆಡಳಿತ ಮಂಡಳಿಗೆ ಶನಿವಾರ ನಡೆದ ಮತದಾನದಲ್ಲಿ ಯೂಸೂಫ್ ಸಿದ್ದಕಿ ಪ್ಯಾನಲ್ ಜಯ ಸಾಧಿಸಿದೆ.

ಒಟ್ಟು 189 ಸದಸ್ಯ ಮತದಾರರು ಇದ್ದು, ಅದರಲ್ಲಿ 186 ಸದಸ್ಯರು ಮತ ಚಲಾಯಿಸಿದ್ದರು ಎಂದು ಚುನಾವಣೆ ಅಧಿಕಾರಿ ಸಾಲೋಮನ್ ಆಲ್ಫ್ರೇಡ್ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಎಸ್.ಎಂ.ಸಜ್ಜನ ಜಂಟಿಯಾಗಿ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಯೂಸೂಫ್ ಸಿದ್ದಿಕಿ ಹಾಗೂ ರಾಮನಗೌಡ ಕೊಲ್ಲೂರ ನೇರ ಜಿದ್ದಾಜಿದ್ದಿ ಸ್ಫರ್ದೆ ಏರ್ಪಟ್ಟಿತು. ಕೊನೆಗೆ ಸಿದ್ದಿಕಿ ಅವರು 93 ಮತ ಪಡೆದರೆ, ರಾಮನಗೌಡ ಕೊಲ್ಲೂರ 91 ಮತಕ್ಕೆ ತೃಪ್ತಿ ಪಡಬೇಕಾಯಿತು. ಕೇವಲ ಎರಡು ಮತದ ಅಂತರದಿಂದ ಸಿದ್ದಿಕಿ ಜಯ ಸಾಧಿಸಿದರು.

ADVERTISEMENT

ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ವಾಸುದೇವ ಕಟ್ಟಿಮನಿ ಹಾಗೂ ಮಲ್ಲಿಕಾರ್ಜುನ ಹುಲಿಮನಿ ಸ್ಫರ್ಧಿಸಿದ್ದರು. ವಾಸುದೇವ(106), ಹುಲಿಮನಿ(73) ಮತ ಪಡೆದರು.

ಅದರಂತೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂತೋಷ ಸತ್ಯಂಪೇಟೆ (108) ಹಾಗೂ ಮಲ್ಲಪ್ಪ ಕುರಿ(71) ಮತ ಸಂಪಾದಿಸಿದರು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಹಯ್ಯಾಳಕರ್ (110) ಹಾಗೂ ಚಂದ್ರಶೇಖರ ಪರಮೇಶ್ವರ (70) ಮತ ಪಡೆದರು.

ಗ್ರಂಥಪಾಲಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ಅರಳಹಳ್ಳಿ (99) ಹಾಗೂ ಲಕ್ಷ್ಮಿಕಾಂತ ಶಿಬರಬಂಡಿ 81 ಮತ ಪಡೆದರು. ಖಜಾಂಚಿ ಸ್ಥಾನಕ್ಕೆ ಸತ್ಯಮ್ಮ ಹೊಸಮನಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸಂಘದ ಸದಸ್ಯರ ಸಾಂಘಿಕ ಹೋರಾಟ ಹಾಗೂ ಯಾವುದೇ ಜಾತಿ ಧರ್ಮದ ಸೋಂಕು ಇಲ್ಲದೆ ಮತ ಚಲಾಸಿದ ಸದಸ್ಯರಿಗೆ ಋಣಿಯಾಗಿರುವೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವೆ
ಯೂಸೂಫ್ ಸಿದ್ದಕಿ ನೂತನ ಅಧ್ಯಕ್ಷ ವಕೀಲರ ಸಂಘ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.