ADVERTISEMENT

ಕೊಡೇಕಲ್ಲ: ಕಾಲಜ್ಞಾನಿಯ ಜಾತ್ರೆ ಸಂಭ್ರಮ 

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:53 IST
Last Updated 13 ಏಪ್ರಿಲ್ 2025, 15:53 IST
ವೃಷಬೇಂದ್ರ ಅಪ್ಪನವರು
ವೃಷಬೇಂದ್ರ ಅಪ್ಪನವರು   

ಹುಣಸಗಿ: ಉತ್ತರ ಕರ್ನಾಟಕ ಭಾಗದಲ್ಲಿ ಕಾಲಜ್ಞಾನದ ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸಿ ಸರಿದಾರಿಯಲ್ಲಿ ನಡೆಯುವಂತೆ ಮಾಡಿದವರು ಕೊಡೇಕಲ್ಲ ಬಸವೇಶ್ವರರು.

ಹಲವಾರು ವಿಶಿಷ್ಟ ಸಂಪ್ರದಾಯ ಪದ್ಧತಿಗಳ ಮೂಲಕ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವವರು ಕೊಡೇಕಲ್ಲ ಬಸವೇಶ್ವರರು. ಅಂತಹ ಸಮಾನತೆಗೆ ಭದ್ರ ಬುನಾದಿ ಹಾಕಿದ ಕೊಡೇಕಲ್ಲ ಬಸವೇಶ್ವರ ಜಾತ್ರೆಯು ಇಂದು ಭಾನುವಾರ ಶ್ರದ್ಧಾ ಭಕ್ತಿಯಿಂದ ಆರಂಭವಾಯಿತು.

ಬೆಳಿಗ್ಗೆ ನಗಾರಿ ಪೂಜೆ ರಾತ್ರಿ ಜೋಡು ಪಲ್ಲಕ್ಕಿಗಳಿಗೆ ಚಿನ್ನದ ಕಳಸಾರೋಹಣ ಹಾಗೂ ಅಷ್ಟವಿಧಾರ್ಚನೆ ಪೂಜಾ ಕಾರ್ಯಕ್ರಮ ಮಹಲಿನ ಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ನಡೆಯಿತು.

ADVERTISEMENT

ಗ್ರಾಮದ ಬಾರಾ ಬಲೂತಿ ವತದಾರರ ಸಮ್ಮುಖದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಹಿಂದು ಮುಸ್ಲಿಂ ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ಜೋಡು ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಜಿಲ್ಲೆ ಸೇರಿದಂತೆ ಸುತ್ತಮುಲಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ ರಾಯಚೂರು ಸೇರಿದಂತೆ ಸಹಸ್ರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ಬಸವೇಶ್ವರದ ದರ್ಶನ ಪಡೆದು ಭಕ್ತಿ ಸಮರ್ಪಿಸುತ್ತಾರೆ.

ವರ್ಷದಲ್ಲಿ ಎರಡು ಬಾರಿ ಯುಗಾದಿಯಾದ 16 ನೇ ದಿನ ಹಾಗೂ ದೀಪಾವಳಿಯಾದ 16 ದಿನಕ್ಕೆ ನಡೆಯುವ ಈ ಜಾತ್ರೆಯು ಹಲವಾರು ವಿಶೇಷತೆಗಳಿಂದ ಕೂಡಿದ್ದು, ಮುಸ್ಲಿಂ ಸಮುದಾಯದ ನಿರ್ದಿಷ್ಟ ಮನೆತನದವರು ಪಲ್ಲಕ್ಕಿ ಉತಸವದಲ್ಲಿ ಪಾಲ್ಗೊಂಡು ದೇವಸ್ಥಾನದ ಆವರಣದಲ್ಲಿ ಖುರಾನ್ ಪಠಿಸಿದ ಬಳಿಕ ಸಿಡಿಗಾಯಿ ಒಡೆಯಲಾಗುತ್ತದೆ. ಅಸಂಖ್ಯಾತ ಭಕ್ತರು ಪಾಲ್ಗೊಂಡು ದರ್ಶನ ಪಡೆಯುತ್ತಾರೆ.

ಈ ಜಾತ್ರೆಯ ಬಳಿಕ ಮಂಗಳವಾರದಿಂದ ಶುಕ್ರವಾರದವರೆಗೆ ಜಾನುವಾರುಗಳ ಜಾತ್ರೆಯೂ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.

ವರ್ಷದಲ್ಲಿ ಎರಡು ಬಾರಿ ನಡೆಯುವ ಕೊಡೇಕಲ್ಲ ಬಸವೇಶ್ವರ ಜಾತ್ರೆ ಅಸಂಖ್ಯಾತ ಭಕ್ತರ ಶ್ರದ್ಧಾಕೇಂದ್ರವಾಗಿದೆ. ತನ್ನದೇ ವಿಶೇಷತೆಗಳನ್ನು ಹೊಂದಿದೆ.
ವೃಷಬೇಂದ್ರ ಅಪ್ಪನವರು ಮಹಲಿನಮಠ ಕೊಡೇಕಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.