ಹುಣಸಗಿ: ತಾಲ್ಲೂಕಿನ ಬೊಮ್ಮನಗುಡ್ಡ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು.
ಬೆಳಿಗ್ಗೆ ಶಾಲೆಗೆ ಗ್ರಾಮದ ಮಕ್ಕಳು ಆಗಮಿಸಲು ಸಿದ್ಧರಾಗುತ್ತಿದ್ದಂತೆ ಗ್ರಾಮದ ಹಿರಿಯರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಮಕ್ಕಳನ್ನು ಅಲಂಕೃತ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ಶಾಲೆಗೆ ಕರೆದುಕೊಂಡು ಬರಲಾಯಿತು. ಗ್ರಾಮದೆಲ್ಲಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶಾಲೆಯ ಮುಖ್ಯ ಶಿಕ್ಷಕಿ ಜುಲೇಖಾ ಬೇಗಂ ಮಾತನಾಡಿ, ‘ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವದಿಂದಾಗಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ ನಮಗೂ ಕೂಡಾ ಹೊಸತನವನು ತಂದುಕೊಟ್ಟಿತು’ ಎಂದು ಹೇಳಿದರು.
ಈ ಸಂದರ್ಬದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಕದರಾಪುರ, ಪ್ರೌಢ ಶಾಲೆ ಮುಖ್ಯಶಿಕ್ಷಕ ಶರಣಗೌಡ ಪಾಟೀಲ, ಅಮರೇಶ ಅಗ್ನಿ, ಅಯ್ಯನಗೌಡ , ಕನಕರಾಯ, ಈರಪ್ಪ ಕುಂಬಾರ, ರಾಮನಗೌಡ ಪೊಲೀಸ್ ಪಾಟೀಲ, ಗದ್ದೆಪ್ಪ ಜಾಲಹಳ್ಳಿ, ಗುರುಬಸಪ್ಪ ಮೇಟಿ, ರಮೇಶ ಅಂಬಿಗೇರ, ನಿಂಗಣ್ಣ ನಾಗೂರ, ಅಮರೇಶ ಮಾರಲಬಾವಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.