ADVERTISEMENT

ರಾಷ್ಟ್ರದ ಪ್ರಗತಿಗೆ ಕೈಜೋಡಿಸಿ: ಸಖಾರಾಮ ಶ್ರೀನಿವಾಸುಲು ಕರೆ

ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 6:06 IST
Last Updated 30 ಅಕ್ಟೋಬರ್ 2025, 6:06 IST
<div class="paragraphs"><p><strong>ಗುರುಮಠಕಲ್ ಪಟ್ಟಣದ ಮುಖ್ಯರಸ್ತೆಯಲ್ಲಿ ಬುಧವಾರ ಸಹಸ್ರಾರ್ಜುನ ಮಹಾರಾಜರ ಶೋಭಾಯಾಥ್ರೆ ಜರುಗಿತು.</strong></p></div>

ಗುರುಮಠಕಲ್ ಪಟ್ಟಣದ ಮುಖ್ಯರಸ್ತೆಯಲ್ಲಿ ಬುಧವಾರ ಸಹಸ್ರಾರ್ಜುನ ಮಹಾರಾಜರ ಶೋಭಾಯಾಥ್ರೆ ಜರುಗಿತು.

   

ಗುರುಮಠಕಲ್: ‘ಇಂದು ಭಾರತ ದೇಶದ ಪ್ರಗತಿ ವೇಗ ಹೆಚ್ಚಿದೆ. ನಮ್ಮ ಎಸ್‌ಎಸ್‌ಕೆ ಸಮಾಜವೂ ರಾಷ್ಟ್ರ ಪ್ರಗತಿಯಲ್ಲಿ ಭಾಗಿಯಾಗಬೇಕು’ ಎಂದು ಇಸ್ರೊದ ವಿಶ್ರಾಂತ ವಿಜ್ಞಾನಿ ಸಖಾರಾಮ ಶ್ರೀನಿವಾಸುಲು ಕರೆ ನೀಡಿದರು.

ಪಟ್ಟಣದಲ್ಲಿ ಬುಧವಾರ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರೀಯ (ಎಸ್‌ಎಸ್‌ಕೆ) ಸಮಾಜದ ವತಿಯಿಂದ ಆಯೋಜಿಸಿದ್ದ ‘ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವ’ ಕಾರ್ಯಕ್ರಮದಲ್ಲಿ ‍ಅವರು ಮಾತನಾಡಿದರು.

ADVERTISEMENT

‘ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಭಿಯಾಗಿದೆ. ಇಸ್ರೊ ಸಂಸ್ಥೆಯೊಡನೆ ಕೆಲಸ ಮಾಡಲು ಮತ್ತು ಕಲಿಕೆಗಾಗಿ ಜಗತ್ತಿನ 40 ರಾಷ್ಟಗಳು ತುದಿಗಾಲಿನಲ್ಲಿವೆ. ನಮ್ಮ ಸಮಾಜವೂ ಉನ್ನತ ಶಿಕ್ಷಣ ಪಡೆಯುವುದು ಅವಶ್ಯ. ನಾಗರಿಕ ಸೇವೆ (ಯುಪಿಎಸ್‌ಸಿ)ಯಲ್ಲಿ ನಮ್ಮ ಸಮಾಜದ ಯುವಕರು ತೊಡಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

‘ಸಹಸ್ರಾರ್ಜುನ ಮಹಾರಾಜರ ಜನ್ಮಸ್ಥಳ ಮಹೇಶ್ವರದ ನದಿ ತಟದಲ್ಲಿ ನೂರು ಎಕರೆ ಪ್ರದೇಶದಲ್ಲಿ ಸ್ಮಾರಕ, ಪುತ್ಥಳಿ ಸ್ಥಾಪನೆ ಕಾರ್ಯಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಜತೆಗೆ ಎಸ್‌ಎಸ್‌ಕೆ ಸಮಾಜದ ಪ್ರತಿಭಾವಂತರಿಗೆ ಐಎಎಸ್‌, ಐಪಿಎಸ್‌, ಐಆರ್‌ಎಸ್‌, ಐಎಫ್‌ಎಸ್‌ ಸೇರಿದಂತೆ ವಿವಿಧ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನೂ ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

‘ಮನೆಯಲ್ಲಿ ತಾಯಂದಿರ ಪಾತ್ರವೇ ಅತ್ಯಮೂಲ್ಯ. ಆದ್ದರಿಂದ ಇಂದು ಮಕ್ಕಳನ್ನು ಐಎಎಸ್‌ ನಂತಹ ಆಡಳಿತಾತ್ಮಕ ಸೇವೆಗಳಲ್ಲಿ ತೊಡಗಿಸುವ ಸಂಕಲ್ಪ ಮಾಡಬೇಕಿದೆ’ ಎಂದರು.

ಯಶವಂತರಾವ ಮೇಂಗಜೀ ಮಾತನಾಡಿ, ಕಾರ್ತವೀರ‍್ಯಾರ್ಜುನ ಮಹಾರಾಜ ಮತ್ತು ಸುರಭಿ ಗೋವಿನ ಕತೆಯ ಕುರಿತು ಹಾಗೂ ಸಖಾರಾಮ ಶ್ರೀನಿವಾಸುಲು ಅವರ ಜೀವನವನ್ನು ವಿವರಿಸಿದರು.

ನಿವೃತ್ತ ಶಿಕ್ಷಕ ಬುಡ್ಡಪ್ಪ ಜನಾರ್ಧನ ಮಾತನಾಡಿ, ‘ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜೀವನವೇ ಇತಿಹಾಸ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಮಾಜದ ಅಧ್ಯಕ್ಷ ಚಂದುಲಾಲ ಚೌಧರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ವೈದ್ಯಕೀಯ ಪ್ರವೇಶ ಪಡೆದ ಮತ್ತು ತೇರ್ಗಡೆಯಾದ ವಿದ್ಯಾರ್ಥಿಗಳು ಮತ್ತು ಸಮಾಜ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು.

ರಾಮಕಿಶನರಾವ ಗೊಂಗಲೆ, ನರಸಿಂಗರಾವ ಕಾಶಿಗಾವ್, ಅಂಬಾದಾಸ ಜೀತ್ರಿ, ಯಶವಂತರಾವ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಸುಷ್ಮಾ ಚೌಧರಿ, ಅನಿಲ್ ಉಪಸ್ಥಿತರಿದ್ದರು.

ನಮ್ಮ ಸಮಾಜದ ಮಕ್ಕಳ ವಿದ್ಯೆ, ಉನ್ನತ ಗುರಿ ಸಾಧನೆಗೆ ಪೋಷಕರು ಸೂಕ್ತ ವಾತಾವರಣ ಕಲ್ಪಿಸಬೇಕಿದೆ. ಸಮಾಜದಿಂದ ಉಚಿತ ಐಎಎಸ್‌, ಐಪಿಎಸ್‌ ತರಬೇತಿ ಒದಗಿಸಬೇಕು
ಹಣಮಂತರಾವ ಗೋಂಗ್ಲೆ, ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.