ADVERTISEMENT

Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:33 IST
Last Updated 16 ಜನವರಿ 2026, 16:33 IST

ಕಲ್ಯಾಣ ಕರ್ನಾಟಕದ ಸಗರ ನಾಡು ಖ್ಯಾತಿಯ ಶಹಾಪುರದ ಬಲಭೀಮೇಶ್ವರ ಮತ್ತು ಸಂಗಮೇಶ್ವರನ ಸನ್ನಿಧಾನದಲ್ಲಿ, ಧಗಧಗಿಸುವ ದೀವಟಿಗೆಗಳನ್ನು ಹಿಡಿದು ಜೋಡಿ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೀವಟಿಗೆಗಳ ಎರಡು ಸಾಲುಗಳು, ಅಲಂಕೃತ ವಿದ್ಯುತ್ ದೀಪಗಳ ನಡುವೆ ಜೋಡಿ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆಯು ಅಹೋ ರಾತ್ರಿ ಸಾಗಿತು. ರಸ್ತೆಯ ಎರಡು ಬದಿಯಲ್ಲಿನ ಕಟ್ಟಡಗಳು, ಮನೆಯ ಛಾವಣಿಗಳ ಮೇಲೆ ನಿಂತ ಸಾವಿರಾರು ಜನರು ಈ ವೈಭವವನ್ನು ಕಣ್ತುಂಬಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.