ADVERTISEMENT

ಸಂತ್ರಸ್ತರ ಕುಟುಂಬಕ್ಕೆ ನ್ಯಾಯಾಧೀಶರ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:18 IST
Last Updated 7 ಜುಲೈ 2022, 4:18 IST
ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹಿಲ್ ಅಹಮದ್ ಕುನ್ನಿಭಾವಿ ಬುಧವಾರ ಭೇಟಿ ನೀಡಿದರು
ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹಿಲ್ ಅಹಮದ್ ಕುನ್ನಿಭಾವಿ ಬುಧವಾರ ಭೇಟಿ ನೀಡಿದರು   

ಯಾದಗಿರಿ: ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಜೂನ್ 29ರಂದು ವ್ಯಕ್ತಿಯೊಬ್ಬ ಕೋಣೆಗೆ ಬೆಂಕಿ ಹಚ್ಚಿ ನಾಲ್ಕು ಜನರ ಸಾವಿಗೆ ಕಾರಣವಾದ ಭೀಕರ ಕೃತ್ಯದ ಘಟನಾ ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಹಿಲ್ ಅಹಮದ್ ಕುನ್ನಿಭಾವಿ ಅವರು ಬುಧವಾರ ಭೇಟಿ ನೀಡಿದರು.

ಆರೋಪಿ ಶರಣಪ್ಪನಿಂದ ಮೃತಪಟ್ಟವರ, ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಮೃತಪಟ್ಟವರ, ಕುಟುಂಬ ಸಂತ್ರಸ್ತರು, ಸಂತ್ರಸ್ತರ ಪರಿಹಾರ ನಿಧಿ ಅಡಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು.

ಪತ್ನಿ ವಿಚ್ಛೇದನ ನೀಡದಕ್ಕೆ ಕುಪಿತಗೊಂಡ ಪತಿ ಶರಣಪ್ಪ ಇತ್ತೀಚೆಗೆ ಆಕೆಯ ತಂದೆ ಮತ್ತು ಮೂವರು ಸಂಬಂಧಿಕರನ್ನು ನ್ಯಾಯ ಪಂಚಾಯಿತಿ ಮಾಡೋಣವೆಂದು ಕರೆಯಿಸಿ, ಬಂದವರಿಗೆ ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಲು ಮುಂದಾದ ಘಟನೆ ನಡೆದಿತ್ತು. ಬೆಂಕಿ ಅನಾಹುತದಲ್ಲಿ ನಾಲ್ವರು ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.