ADVERTISEMENT

‘ಶಿಕ್ಷಣದಿಂದ ಸಮಾಜ ಉನ್ನತಿ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 3:00 IST
Last Updated 12 ನವೆಂಬರ್ 2022, 3:00 IST
ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿದರು
ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿದರು   

ಶಹಾಪುರ: ‘ಕನಕದಾಸರ ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಾಗಿದೆ. ಶಿಕ್ಷಣದಿಂದ ಸಮಾಜ ಉನ್ನತಿಯನ್ನು ಸಾಧಿಸಲು ಸಾಧ್ಯ’ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ, ಕನಕ ನೌಕರರ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ, ರಾಯಣ್ಣ ಯುವ ಪಡೆ, ಕನಕ ಯುವ ಸೇನೆ ವತಿಯಿಂದ ಕನಕದಾಸರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಮಾತನಾಡಿದರು.

ADVERTISEMENT

ಕನಕ ಗುರು ಪೀಠ ತಿಂಥಣಿಯ ಬೀರಲಿಂಗೇಶ್ವರ ದೇವರು, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತಪ್ಪ ಕಂದಕೂರ, ಮರಿಗೌಡ ಪಾಟೀಲ ಹುಲಕಲ, ಶರಣಪ್ಪ ಸಲಾದಪುರ, ಡಾ.ಚಂದ್ರಶೇಖರ ಸುಬೇದಾರ, ಡಾ.ರಾಜೂಗೌಡ ಉಕ್ಕಿನಾಳ, ಬಸವರಾಜ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಶರಬಣ್ಣ ರಸ್ತಾಪುರ, ಶಾಂತಗೌಡ ನಾಗನಟಿಗಿ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಇದ್ದರು.

₹5ಲಕ್ಷ ಚೆಕ್ ಘೋಷಣೆ ಗೊಂದಲ: ಬಿಜೆಪಿ ಮುಖಂಡ ಅಮೀನರೆಡ್ಡಿ ಪಾಟೀಲ ಯಾಳಗಿ, ‘ಬೆಟ್ಟದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹5 ಲಕ್ಷ ಚೆಕ್ ನೀಡುತ್ತೇನೆ’ ಎಂದು ಘೋಷಿಸಿದಾಗ ವೇದಿಕೆಯ ಮೇಲೆ ಚೆಕ್ ನೀಡುವುದು ಬೇಡ ಎಂದು ಮುಖಂಡರು ವಿರೋಧಿಸಿದರು.

ಇದರಿಂದ ಕೆಲ ಹೊತ್ತು ಗೊಂದಲ ಉಂಟಾಯಿತು. ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.