
ಶಹಾಪುರ: ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವವನ್ನುವಹಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ದೇಶಾಭಿಮಾನ ಹಾಗೂ ಸ್ವಾಭಿಮಾನಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅವರ ಐತಿಹಾಸಿಕ ಚರಿತ್ರೆಯು ಸಾಹಿತ್ಯದ ಮೂಲಕ ಇತಿಹಾಸ ಜಾಗೃತಿ ಮೂಡಿಸಿ’ ಎಂದು ಭೀಮರಾಯನಗುಡಿ ಸುರಪುರ ಸಂಸ್ಥಾನದ ಇತಿಹಾಸ ಸಂಶೋಧನಾ ಕೇಂದ್ರದ ಮುಖ್ಯಸ್ಥ ಭಾಸ್ಕರರಾವ ಮುಡಬೂಳ ತಿಳಿದರು.
ನಗರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ 67ನೇ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಭಾರತದ ಒಕ್ಕೂಟದಲ್ಲಿ ಪ್ರಾದೇಶಿಕ ಭಾಷೆಗಳ ಮಹತ್ವ ಕುರಿತು ಅವರು ಮಾತನಾಡಿದರು.
ಚಿಂತಕ ವಿಶ್ವಾರಾಧ್ಯ ಸತ್ಯಂಪೇಟ ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ.ಶಿವಣ್ಣ ಇಜೇರಿ, ಸಯ್ಯದ ಚಾಂದಪಾಶ, ಸಾಲೋಮನ್ ಆಲ್ಫ್ರೇಡ್, ಸಣ್ಣ ನಿಂಗಣ್ಣ ನಾಯಕೊಡಿ. ಅಡಿವೆಪ್ಪಾ ಜಾಕಾ, ಮಲ್ಲಿಕಾರ್ಜುನ ಪೂಜಾರಿ, ಸಿದ್ದಪ್ಪ ಹೊಸಮನಿ, ಬಸವರಾಜ ಹಿರೇಮಠ, ರವೀಂದ್ರನಾಥ ಹೊಟ್ಟಿ, ಮರೆಪ್ಪ ಜಾಲಿಬೆಂಚಿ,ಎನ್,ಸಿ,ಪಾಟೀಲ್. ಡಾ. ದೇವಿಂದ್ರಪ್ಪ ಹಡಪದ ಇದ್ದರು.
ಚಂದ್ರಕಲಾ ಗೂಗಲ್ ಹಾಗೂ ಹಿರಿಯ ಪತ್ರಕರ್ತ ಈರಣ್ಣ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.