ಸೈದಾಪುರ: ‘ಇಂದಿನ ಬಹುತೇಕ ಜನರಿಗೆ ಕಾನೂನುಗಳ ಬಗ್ಗೆ ಸಮರ್ಪಕವಾದ ಮಾಹಿತಿ ಇಲ್ಲದ್ದರಿಂದ ನಾನಾ ಅವಘಡಗಳು ಸಂಭವಿಸುತ್ತವೆ. ಇವುಗಳು ನಡೆಯಬಾರದು ಎಂದರೆ ಕಾನೂನಿನ ಮಾಹಿತಿ ಅವಶ್ಯಕ’ ಎಂದು ವಕೀಲ ಪ್ರಶಾಂತ ದೇಶಮುಖ ಹೇಳಿದರು.
ಸಮೀಪದ ಬೆಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಅಭಿಯಾನ ಉದ್ಘಾಟಿಸಿ
ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ವೆಂಕರೆಡ್ಡಿಗೌಡ, ಪಿಡಿಒ ಮುದುಕಣ್ಣ, ಮುಖ್ಯಶಿಕ್ಷಕಿ ಚೆನ್ನಮ್ಮ, ಶಿಕ್ಷಕರಾದ ಅಶೋಕ ಕೆ.ಎಂ, ಸವಿತಾದೇವಿ, ಮೋನಪ್ಪ, ಬಸವರಾಜ ಆನೂರು, ಗ್ರಾಮ ಪಂಚಾಯಿತಿ ಸದಸ್ಯರು, ವಿದ್ಯಾರ್ಥಿಗಳು
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.