
ಹುಣಸಗಿ: ‘ಮುಂಬರುವ ಜ. 9 ರಂದು ಹಮ್ಮಿಕೊಂಡಿರುವ ಕಸಾಪ ತಾಲ್ಲೂಕು ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸುವಂತಾಗಲು ಎಲ್ಲ ಇಲಾಖೆಯರೂ ಕೈಜೋಡಿಸುವುದ ಮುಖ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ್ ಹೇಳಿದರು.
ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಕರಪತ್ರ ಬಿಡುಗಡೆ ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಇತರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಎನ್ನುವದು ಅತ್ಯಂತ ಮಹತ್ವದ್ದು ಹಾಗೂ ತಾಲ್ಲೂಕಿನಲ್ಲಿ ಹಬ್ಬದ ಕಳೆಕಟ್ಟಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು.
ಗೌರವ ಕಾರ್ಯದರ್ಶಿ ಗುರು ಹುಲಕಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ವಿಷಯಗಳ ಕಾರ್ಯಸೂಚಿಯ ಕುರಿತು ಮಾತನಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಎಲ್ಲ ಇಲಾಖೆಯ ಬಾಂಧವರು ತನುಮನ ಧನ ಹಾಗೂ ಸಮಯ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೆ ಕಾರಣರಾಗಬೇಕು’ ಎಂದರು.
ಹಿರಿಯರಾದ ನಾಗಪ್ಪ ಅಡಿಕ್ಯಾಳ, ಸಮ್ಮೇಳನ ವಕ್ತಾರ ಬಸವರಾಜ ಸಜ್ಜನ, ಕೋಶಾಧ್ಯಕ್ಷ ಬಸವರಾಜ ಮೇಲಿಮನಿ, ಭೀಮಶೇನರಾವ್ ಕುಲಕರ್ಣಿ, ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳುರು, ಬಸನಗೌಡ ವಠಾರ, ಶಿವಕುಮಾರ ಬಂಡೋಳಿ, ಪರಶುರಾಮ, ಅಶೋಕ ರಾಜನಕೋಳುರು ಸೇರಿದಂತೆ ಇತರರು ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಆರ್.ಎಂ.ರೇವಡಿ, ಹೊನ್ನಕೇಶವ ದೇಸಾಯಿ, ವಿಜಯಕುಮಾರ ದೇಸಾಯಿ, ಬಸವರಾಜ ತೆಗ್ಗೇಳ್ಳಿ, ಮಶಾಕ ಯಾಳಗಿ, ಶಿಕ್ಷಕಿ ನೀಲಮ್ಮ ನಾಗರಬಟ್ಟ, ಶಶಿಕಲಾ ಮಠ, ಶೋಭಾ ನಾಯ್ಕೋಡಿ, ಅಕ್ಕಮಹಾದೇವಿ ದೇಶಮುಖ, ಶೇಖಪ್ಪ ಬಚಬನೂರು, ಕಾಂತೇಶ ಹಲಗಿಮನಿ, ರಾಜಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.
ನಾಗನಗೌಡ ಪಾಟೀಲ ನಿರೂಪಿಸಿದರು. ಗುರು ರಾಠೋಡ ಸ್ವಾಗತಿಸಿದರು. ಬಸನಗೌಡ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.