ADVERTISEMENT

‘ನೆಹರೂ ನಿಲುವಿನಿಂದ ಕಾಶ್ಮೀರ ಸಮಸ್ಯೆ ಉದ್ಭವ’

ಒಂದು ರಾಷ್ಟ್ರ ಒಂದು ಸಂವಿಧಾನ ಆಶಯ ನನಸಾಗಿದೆ: ಅರುಣುಕುಮಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 10:46 IST
Last Updated 29 ಸೆಪ್ಟೆಂಬರ್ 2019, 10:46 IST
ಯಾದಗಿರಿಯ ಮಹಾವೀರ ಭವನದಲ್ಲಿ ಶನಿವಾರ ನಡೆದ ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಮಾತನಾಡಿದರು
ಯಾದಗಿರಿಯ ಮಹಾವೀರ ಭವನದಲ್ಲಿ ಶನಿವಾರ ನಡೆದ ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಮಾತನಾಡಿದರು   

ಯಾದಗಿರಿ: ‘ಆಗಿನ ಪ್ರಧಾನಿ ಜವಾಹರಲಾಲ್‌ ನೆಹರು ಕಾರಣದಿಂದ ಕಾಶ್ಮೀರ ಸಮಸ್ಯೆ ಉದ್ಭವಾಗಿತ್ತು. ಈಗ 370 ವಿಧಿ ರದ್ದತಿಯಿಂದ ಅದು ತೊಲಗಿದೆ’ ಎಂದು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಹೇಳಿದರು.

ನಗರದ ಮಹಾವೀರ ಭವನದಲ್ಲಿ ಶನಿವಾರ ನಡೆದ ‘ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ’ದಲ್ಲಿ ಅವರು ಮಾತನಾಡಿದರು.

‘ನೆಹರೂ ಪುಸ್ತಕ, ಕಾವ್ಯಗಳಲ್ಲಿ ಮಾತ್ರ ಪಂಡಿತರಾಗಿದ್ದರು. ಅದು ಬಿಟ್ಟು ಪ್ರಪಂಚ ಅವರಿಗೆ ಗೊತ್ತಿರಲಿಲ್ಲ. ಅಲ್ಲದೆ ನೋಬೆಲ್ ಶಾಂತಿ ಪ್ರಶಸ್ತಿ ಪಡೆಯಲು ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿ ಇಟ್ಟಿದ್ದರು. ಅವರ ವಿಳಂಬ ನೀತಿಯಿಂದ 370 ವಿಧಿ ಪರಿಹಾರ ಕಾಣಲಿಲ್ಲ ಎಂದು ಟೀಕಿಸಿದರು.

ADVERTISEMENT

‘ಡಾ.ಅಂಬೇಡ್ಕರ್‌ ಅವರು ಒತ್ತಡದಿಂದ 370 ವಿಧಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಅವರಿಗೆ ಒಂದು ದೇಶ ಒಂದೇ ಸಂವಿಧಾನ ಇರಬೇಕೆಂಬ ಆಶಯ ಇತ್ತು. ಆದರೆ, ಅದನ್ನು ತಾತ್ಕಾಲಿಕ ಎಂದು ನಮೂದಿಸಿದ್ದರಿಂದ ಈಗ ಅದು ರದ್ದಾಗಿದೆ. ಇದರಿಂದ ಅಲ್ಲಿ ನಿಜವಾದ ಸ್ವರ್ಗ ಸೃಷ್ಟಿಯಾಗುತ್ತದೆ. ಇದಕ್ಕೆ ಸಾವಿರಾರು ಜನರು ಪ್ರಾಣ, ಬಲಿದಾನ ಮಾಡಿದ್ದಾರೆ’ ಎಂದು ನುಡಿದರು.

ಪ್ರಾಸ್ತಾವಿಕವಾಗಿ ರಾಯಚೂರು ಸಂಸದ ರಾಜಾಅಮರೇಶ್ವರ ನಾಯಕ ಮಾತನಾಡಿ,‘370 ವಿಧಿ ರದ್ದತಿಯಿಂದ ದೇಶಕ್ಕೆಲ್ಲ ಒಂದೇಸಂವಿಧಾನವಾಗಿದೆ’ ಎಂದರು.

ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಗೌಡ ಮಾಗನೂರ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಪಕ್ಷದ ಮುಖಂಡರಾದ ನಾಗರತ್ನ ಕುಪ್ಪಿ, ಹಿರಿಯ ವಕೀಲ ಬಿ. ಜಯಚಾರ್ಯ, ಎಂ.ವಿ.ಕರಿಗೌಡರು, ಬಸವರಾಜ ಪಾಟೀಲ ಕ್ಯಾತನಾಳ, ಎಸ್.ಪಿ.ನಾಡೇಕರ್, ಸಂಜೀವಕುಮಾರ ಚಿನ್ನಾಕಾರ, ಸಿದ್ದಣ್ಣಗೌಡ ಕಾಡಂನ್ನೂರ, ದೇವೇಂದ್ರನಾಥ ನಾದ, ಬಸವರಾಜ ಪಾಟೀಲ ಬಿಳ್ಹಾರ, ಶರಣಗೌಡ ಬಾಡಿಯಾಳ, ವಿಶ್ವನಾಥ ರಡ್ಡಿ ಜೋಳದಡಿಗಿ, ಖಂಡಪ್ಪ ದಾಸನ್, ಹಣಮಂತ ಇಟಿಗಿ, ಶರಣಗೌಡ ಅಲ್ಲಿಪುರ, ವಿಲಾಸ ಪಾಟೀಲ, ಸೂಗರೇಶ ಮಾಲಿ ಪಾಟೀಲ, ಸೋಷಿಯಲ್ ಮೀಡಿಯಾದ ಸಂಚಾಲಕ ಪ್ರಭುಗೌಡ ನಾಯ್ಕಲ್, ಲಲಿತಾ ಅನಪುರ, ಸುನಿತಾ ಚವ್ಹಾಣ್, ಶಿವಕಾಂತಮ್ಮ, ವೀಣಾ ಮೋದಿ, ಎಚ್.ಸಿ.ಪಾಟೀಲ, ಅಡೆವಪ್ಪ ಜಾಕಾ, ನರಸಿಂಹಲು ನೀರಹಟ್ಟಿ, ದೇವೇಂದ್ರಪ್ಪ ಯರಗೋಳ, ಸಂಘಟನಾ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆ ತುಮಕೂರು, ಸೂರ್ಯಕಾಂತ ಆಕಳ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.