ADVERTISEMENT

ಚಂದ್ರಶೇಖರ ಉಡುಪ ನುಡಿ ನಮನ 

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 8:00 IST
Last Updated 13 ಜನವರಿ 2026, 8:00 IST
ಕೆಂಭಾವಿಯ ಹೋಲಿಫೇಥ್ ಶಾಲೆಯಲ್ಲಿ ಈಚೆಗೆ ನಿಧನ ಹೊಂದಿದ ಸಾಲಿಗ್ರಾಮ ಡಿವೈನ್ ಪಾರ್ಕ ಸಂಸ್ಥಾಪಕರಾದ ಎ.ಚಂದ್ರಶೇಖರ ಉಡುಪ ಅವರಿಗೆ ವಿವೇಕ ಜಾಗೃತ ಬಳಗದಿಂದ ನುಡಿ ನಮನ ಸಲ್ಲಿಸಲಾಯಿತು
ಕೆಂಭಾವಿಯ ಹೋಲಿಫೇಥ್ ಶಾಲೆಯಲ್ಲಿ ಈಚೆಗೆ ನಿಧನ ಹೊಂದಿದ ಸಾಲಿಗ್ರಾಮ ಡಿವೈನ್ ಪಾರ್ಕ ಸಂಸ್ಥಾಪಕರಾದ ಎ.ಚಂದ್ರಶೇಖರ ಉಡುಪ ಅವರಿಗೆ ವಿವೇಕ ಜಾಗೃತ ಬಳಗದಿಂದ ನುಡಿ ನಮನ ಸಲ್ಲಿಸಲಾಯಿತು   

ಕೆಂಭಾವಿ: ‘ಚಂದ್ರಶೇಖರ ಉಡುಪ ಅವರ ಕೃಪೆಯಲ್ಲಿ ಉಂಡವರಲ್ಲಿ ನಾನೂ ಒಬ್ಬ. ಕೆಂಭಾವಿ ಬಳಗ ಬೆಳೆದು ಬಂದ ದಾರಿಯನ್ನು ವಿವರಿಸುತ್ತ ನಾವೆಲ್ಲ ಒಂದೇ ಕುಟುಂಬದಂತೆ ಒಟ್ಟಿಗೆ ಇರುವುದು ಅವರ ಆಶೀರ್ವಾದದಿಂದಲೆ ಸಾಧ್ಯವಾಗಿದೆ’ ಎಂದು ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ಸುಮಿತ್ರಪ್ಪ ಅಂಗಡಿ ಹೇಳಿದರು.

ಈಚೆಗೆ ನಿಧನ ಹೊಂದಿದ ಸಾಲಿಗ್ರಾಮ ಡಿವೈನ್ ಪಾರ್ಕ ಸಂಸ್ಥಾಪಕ ಎ.ಚಂದ್ರಶೇಖರ ಉಡುಪ ಅವರಿಗೆ ಪಟ್ಟಣದ ಹೋಲಿಫೇಥ್ ಶಾಲೆಯಲ್ಲಿ ವಿವೇಕ ಜಾಗೃತ ಬಳಗದಿಂದ ನುಡಿ ನಮನ ಸಲ್ಲಿಸಿ ಮಾತನಾಡಿದರು.

ಬಳಗದ ಕಾರ್ಯಕಾರಿ ಶರಣಬಸಯ್ಯ ಹಿರೇಮಠ ಮಾತನಾಡಿ, ‘ಚಂದ್ರಶೇಖರ ಉಡುಪ ಅವರು ಒಬ್ಬ ಮಹಾನ್ ಸಾಧಕರು. ಅವರ ಸಂದೇಶಗಳು ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತವೆ. ಎಲ್ಲ ಧರ್ಮಗಳ ಸಾಮರಸ್ಯದ ಮೂಲಕ ಏಕತೆಯ ಬೆಳಕು ತಂದರು. ಅವರ ತತ್ವ-ಸಿದ್ಧಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.

ADVERTISEMENT

ಕೆಂಭಾವಿ ಬಳಗದ ಅಧ್ಯಕ್ಷ ಡಾ. ಎ.ಜಿ.ಹಿರೇಮಠ, ಹಳ್ಳೆಪ್ಪಗೌಡ ಪಾಟೀಲ, ರಮೇಶ ಸೊನ್ನದ, ಗುಡದಯ್ಯ ದಾವಣಗೇರಿ, ಡಾ. ಗೀತಾ ಹಿರೇಮಠ, ಉಮಾದೇವಿ ಪಾಟೀಲ, ಡಾ.ಶೈಲಜಾ ಹಿರೇಮಠ, ಪವಿತ್ರಾ ವಡ್ಡೆ, ಅಕ್ಕಮಹಾದೇವಿ ಹಿರೇಮಠ, ರೇಖಾ ಬೈಚಬಾಳ ಮತ್ತು ಶಾಲೆಯ ಮಕ್ಕಳು ಸಭೆಯಲ್ಲಿ  ಭಾಗವಹಿಸಿದರು.

ಈ ವೇಳೆ ಪ್ರತಿನಿತ್ಯ ಸತ್ಸಂಗದಂತೆ ಪ್ರತಿಜ್ಞಾ ವಿಧಿ, ಓಂಕಾರ, ರಾಮರಕ್ಷಾಸತೂತ್ರ ಪಠಣ, ಭಜನೆ ಇತ್ಯಾದಿಗಳು ನಡೆದವು. ಕಾರ್ಯಕ್ರಮ ಮತ್ತು ಪ್ರಸಾದದ ವ್ಯವಸ್ಥೆಯನ್ನು ಶಾಲೆ ಮುಖ್ಯಸ್ಥ ನರಸಿಂಹ ವಡ್ಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.