ADVERTISEMENT

ನಿರಂತರ ಓದಿನೊಂದಿಗೆ ಜ್ಞಾನ ಹೆಚ್ಚಿಸಿಕೊಳ್ಳಿ: ಸಾಹಿತಿ ಕನಕಪ್ಪ ವಾಗಣಗೇರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:46 IST
Last Updated 4 ಡಿಸೆಂಬರ್ 2025, 5:46 IST
ಹುಣಸಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿದರು
ಹುಣಸಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿದರು   

ಹುಣಸಗಿ: ‘ಸತ್ವಯುತ ಸಾಹಿತ್ಯವನ್ನು ನಿರಂತರ ಓದುವ ಮೂಲಕ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ’ ಎಂದು ಸಾಹಿತಿ ಕನಕಪ್ಪ ವಾಗಣಗೇರಿ ಹೇಳಿದರು.

ಹುಣಸಗಿ ತಾಲ್ಲೂಕಿನ ಬೆನಕನಕಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕುವೆಂಪು ಅವರ ಸಾಹಿತ್ಯವನ್ನು ಓದುತ್ತಾ ಹೋದಂತೆಲ್ಲ ಪ್ರ ತಿಬಾರಿಯೂ ಒಂದೊಂದು ಹೊಸತನ ಆ ಓದಿನಲ್ಲಿ ಕಾಣುವುದಂತೂ ಸತ್ಯ. ಮಕ್ಕಳು ಕೂಡ ಮಕ್ಕಳ ಸಾಹಿತ್ಯವನ್ನು ಓದುವುದನ್ನು ರೂಢಿಸಿಕೊಳ್ಳಬೇಕು’ ಎಂದರು.

ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್ ಮಾತನಾಡಿ ಚಕೋರ ಕಾರ್ಯಕ್ರಮದ ಆಶಯ ನುಡಿ ವ್ಯಕ್ತಪಡಿಸಿ, ನಾಡಿನ ಸಾಹಿತಿಗಳ ಕುರಿತು ಮಾತನಾಡಿದರು.

ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಚಕೋರ ಕಾರ್ಯಕ್ರಮದ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿ ನಾಡಿನಲ್ಲಿ ಮನೆ ಬಾಗಿಲಿಗೆ ಸಾಹಿತ್ಯ ಸಂಸ್ಕೃತಿಯ ಪರಿಚಯ ಮಾಡುತ್ತಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಂಗಮ್ಮ ನಾಗಾವಿ ವಹಿಸಿದ್ದರು.

ಸಾಹಿತಿ ನಾಗನಗೌಡ ಪಾಟೀಲ, ಶಾಲೆ.ಯ ಎಸ್‌ಡಿಎಂಸಿ ಅಧ್ಯಕ್ಷ ಅಮೃತ ಅರಳಗುಂಡಗಿ, ಉಪಾಧ್ಯಕ್ಷ ಶಿವಾಜಿ ಗುಂತಾ, ನಿವೃತ್ತ ಶಿಕ್ಷಕ ಬಸವರಾಜ ಕೋಳಕೂರ, ಚಂದ್ರಕಾಂತ ಕುಲಕರ್ಣಿ, ಹಣಮಂತ್, ಮಾನಪ್ಪ ಚಿಕ್ಕ ಹೆಬ್ಬಾಳ, ತಿರುಪತಿ ದೊರೆ ಇದ್ದರು.

ಸಣ್ಣೆಕ್ಕೆಪ್ಪ ಪೂಜಾರಿ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.