ADVERTISEMENT

ಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಸಂಪನ್ನ

ರಥಾಂಗ ಹೋಮ, ಕಲ್ಯ‍ಾಣೋತ್ಸವ, ತೊಟ್ಟಿಲ ಸೇವೆಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 7:18 IST
Last Updated 6 ನವೆಂಬರ್ 2025, 7:18 IST
ಗುರುಮಠಕಲ್‌ ಹತ್ತಿರದ ಬೋರಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಜರುಗಿತು.
ಗುರುಮಠಕಲ್‌ ಹತ್ತಿರದ ಬೋರಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಜರುಗಿತು.   

ಪ್ರಜಾವಾಣಿ ವಾರ್ತೆ

ಗುರುಮಠಕಲ್‌: ಹತ್ತಿರದ ಬೋರಬಂಡಾ ಗ್ರಾಮದ ಲಕ್ಷ್ಮೀ ತಿಮ್ಮಪ್ಪ ದೇವರ 16ನೇ ವಾರ್ಷಿಕ ರಥೋತ್ಸವ ಬುಧವಾರ ಸಂಪನ್ನಗೊಂಡಿತು.

ಮಂಗಳವಾರ ಬೆಳಿಗ್ಗೆ ವಿಶೇಷ ಅಭಿಷೇಕ ಮೂಲಕ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅಲಂಕಾರ ಸೇವೆ, ಪುರಿಷ ಸೂಕ್ತ ಮತ್ತು ಶ್ರೀಸೂಕ್ತ ಹೋಮಗಳು, ಮಂಗಳಾರತಿ, ಪಲ್ಲಕಿ ಸೇವೆ, ಕಾರ್ತಿಕ ದೀಪೋತ್ಸವ, ಕೀರ್ತನಾ ಸೇವೆಗಳು ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ಜರುಗಿದವು.

ADVERTISEMENT

ಮಂಗಳವಾರ ರಾತ್ರಿ ಗಾಯಕ ಹಣಮಂತ ಲಮಾಣಿ ಅವರಿಂದ ಭಜನೆ ಕಾರ್ಯಕ್ರಮ ಜರುಗಿತು.

ಬುಧವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರಥಾಂಗ ಹೋಮ, ಕಲ್ಯಾಣೋತ್ಸವದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ, ವಿಶೇಷ ಪೂಜೆಯ ನಂತರ ರಥೋತ್ಸವ ಜರುಗಿತು.

‘ಗೋವಿಂದಾ ಗೋವಿಂದ’ ಘೋಷಗಳೊಂದಿಗೆ ತೊಟ್ಟಿಲ ಸೇವೆ, ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು.

ಸಂಜೆಯಿಂದ ಗ್ರಾಮೀಣ ಭಾಗದ ಕೈಕುಸ್ತಿ ಪಂದ್ಯ ಆಯೋಜಿಸಲಾಗಿತ್ತು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ದರ್ಶನ ಪಡೆದರು. ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮಣಿಕಂಠ ರಾಠೋಡ, ಅಯ್ಯಪ್ಪ ರಾಠೋಡ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.